`ಕಷ್ಟಗಳನ್ನು ಎದುರಿಸಿ ಜೀವನ ಸಾರ್ಥಕಪಡಿಸಿಕೊಳ್ಳಿ'

7

`ಕಷ್ಟಗಳನ್ನು ಎದುರಿಸಿ ಜೀವನ ಸಾರ್ಥಕಪಡಿಸಿಕೊಳ್ಳಿ'

Published:
Updated:
`ಕಷ್ಟಗಳನ್ನು ಎದುರಿಸಿ ಜೀವನ ಸಾರ್ಥಕಪಡಿಸಿಕೊಳ್ಳಿ'

ಬಸವನಬಾಗೇವಾಡಿ: `ಜೀವನದಲ್ಲಿ ಸಾಕಷ್ಟು ಕಷ್ಟಗಳು ಬರುತ್ತವೆ. ಅವುಗಳನ್ನು ಯಶಸ್ವಿಯಾಗಿ ಎದುರಿಸಿ ಜೀವನ ಸಾರ್ಥಕಗೊಳಿಸಬೇಕು' ಎಂದು ಸಿವಿಲ್ ನ್ಯಾಯಾಧೀಶ ಮೋಹನ ಪ್ರಭು ಹೇಳಿದರು.ಸ್ಥಳೀಯ ಅಕ್ಕನಾಗಮ್ಮ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ನಿವೃತ್ತ ನೌಕರರ ಸಂಘ ತಾಲ್ಲೂಕು ಘಟಕ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ 11ನೇ ವರ್ಷಾಚರಣೆ, 75 ವರ್ಷ ತುಂಬಿದ ನಿವೃತ್ತ ನೌಕರರ ಸನ್ಮಾನ ಸಮಾರಂಭ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸಲು ಹಿರಿಯರ ಪಾತ್ರ ಮಹತ್ವ ದ್ದಾಗಿದೆ. ಅವರ ಶಿಕ್ಷಣಕ್ಕೆ ಮಹತ್ವ ನೀಡುವುದರೊಂದಿಗೆ ಉತ್ತಮ ಮೌಲ್ಯಗಳನ್ನು ಬೆಳೆಸಬೇಕು. ಅದರಿಂದ ಅವರು ಉತ್ತಮ ನಾಗರಿಕರಾಗಿ ಹೊರ ಹೊಮ್ಮುತ್ತಾರೆ ಎಂದು ಹೇಳಿದರು.ಅಂಗವಿಕಲ ಮತ್ತು ಹಿರಿಯ ನಾಗಿರಿಕರ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿ.ಜಿ.ಉಪಾಧ್ಯ ಮಾತನಾಡಿ ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ನೀಡುವುದರೊಂದಿಗೆ ಅವುಗಳ ಲಾಭ ಪಡೆಯಬೇಕು ಎಂದು ಹೇಳಿದರು.ವಕೀಲ ಎಸ್.ಎಸ್.ಕೊಳೂರ ಸಕಾಲ ಕಾಯ್ದೆ ಕುರಿತು ಉಪನ್ಯಾಸ ನೀಡಿದರು, ಅಧ್ಯಕ್ಷತೆ ವಹಿಸಿದ ಎಂ.ಎಸ್. ಕೊಟ್ಲಿ  ಮಾತನಾಡಿದರು. ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಎಸ್.ಕೆ.ಸೋಮನಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ನ್ಯಾಯಾಧೀಶ ಪಲ್ಲೇದ ರವೀಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ದೇವರು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ.ನಾಗಠಾಣ, ಸಹಕಾರಿ ಮಹಾ ಮಂಡಳದ ನಿರ್ದೇಶಕ ಶಿವನಗೌಡ ಬಿರಾದಾರ, ಬಸವೇಶ್ವರ ದೇವಾಲ ಯದ ಆಡಳಿತಾಧಿಕಾರಿ ಎನ್. ವೈ.ಚಿಕ್ಕೊಂಡ, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಚಿಂಚೋಳಿ, ಸಾಹಿತಿ ಲ.ರು.ಗೊಳಸಂಗಿ, ಕಾ.ಹು.ಬಿಜಾಪುರ, ಎಂ.ಎನ್. ಬಿಷ್ಟ ಗೊಂಡ, ಬಿ.ಪಿ.ಆಲೂರ, ಎಂ.ಪಿ. ಕಟ್ಟಿ, ಜಿ.ಎಸ್.ಪಟ್ಟಣದ, ಎಸ್. ಬಿ.ಬಂಗಾರಿ  ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 75 ವರ್ಷ ತುಂಬಿದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

 

ಗೀತಾ ಘೋರ್ಪಡೆ ಮತ್ತು ಲಕ್ಷ್ಮೀ ಚಂದುಕರ ಪ್ರಾರ್ಥನಾ ಗೀತೆ ಹಾಡಿದರು. ಕೆ.ಬಿ.ಕಡೆಮನಿ ಸ್ವಾಗತಿಸಿ ದರು. ಎಸ್.ಎಸ್.ಝಳಕಿ ವಂದಿಸಿದರು. ಎಸ್.ಬಿ.ಬಶೆಟ್ಟಿ  ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry