ಕಷ್ಟಪಟ್ಟು ಗೆದ್ದ ಬಾಂಗ್ಲಾದೇಶ

7

ಕಷ್ಟಪಟ್ಟು ಗೆದ್ದ ಬಾಂಗ್ಲಾದೇಶ

Published:
Updated:

ಮೀರ್‌ಪುರ (ಪಿಟಿಐ): ಐರ್ಲೆಂಡ್ ದುರ್ಬಲ ಎದುರಾಳಿ ಎನಿಸಿದ್ದರೂ ಬಾಂಗ್ಲಾದೇಶಕ್ಕೆ ಗೆಲುವು ಅಷ್ಟೇನು ಸುಲಭವಾಗಿ ಸಿಗಲಿಲ್ಲ. ದೊಡ್ಡ ಮೊತ್ತ ಪೇರಿಸಲೂ ಆಗಲಿಲ್ಲ,ಎದುರಾಳಿಯನ್ನು ಬೇಗ ಕಟ್ಟಿಹಾಕಲು ಕೂಡ ಆಗಲಿಲ್ಲ. ಕಷ್ಟದ ಹಾದಿಯಲ್ಲಿ ಸಾಗಿ 27 ರನ್‌ಗಳ ಅಂತರ ಜಯ ಪಡೆದಿದ್ದು ಮಾತ್ರ ಸಮಾಧಾನ.ಷೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವಕಪ್ ಕ್ರಿಕೆಟ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದ ಜಯದ ಹಾದಿ ನಿರೀಕ್ಷಿಸಿದಷ್ಟು ಸಲಿಸು ಎನಿಸಲಿಲ್ಲ. ಐರ್ಲೆಂಡ್‌ನವರು ಬಿಗುವಿನ ಬೌಲಿಂಗ್ ದಾಳಿ ನಡೆಸಿದರು. ಆದ್ದರಿಂದ ಸ್ವಂತ ನೆಲದಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾ ರನ್‌ಗಳನ್ನು ಪೇರಿಸಿಡಲು ಸಾಧ್ಯವಾಗಲಿಲ್ಲ. ಬೌಲಿಂಗ್ ಕೂಡ ಅಷ್ಟೇನು ಪರಿಣಾಮಕಾರಿ ಆಗಲಿಲ್ಲ. ಆದ್ದರಿಂದ ಐರ್ಲೆಂಡ್ ತಂಡದವರು 45ನೇ ಓವರ್‌ವರೆಗೆ ಆತಿಥೇಯರನ್ನು ಕಾಡಿದರು.ಟಾಸ್ ಗೆದ್ದ ಶಕೀಬ್ ಅಲ್ ಹಸನ್ ಅವರು ನಿರೀಕ್ಷೆಯಂತೆ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಆದರೆ ತಮ್ಮ ತಂಡದ ಬ್ಯಾಟಿಂಗ್ ಬಲದ ಮೇಲಿನ ಅವರ ವಿಶ್ವಾಸ ಹುಸಿ ಆಯಿತು. 49.2 ಓವರುಗಳಲ್ಲಿ 205 ರನ್‌ಗಳನ್ನು ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳು ಪತನಗೊಂಡವು. ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ (44; 52 ನಿ., 43 ಎ., 7 ಬೌಂಡರಿ) ಅವರ ಕ್ರೀಸ್‌ನಲ್ಲಿ ಗಟ್ಟಿಯಾಗಿದ್ದರೂ ಇನ್ನೊಂದು ಕೊನೆಯಲ್ಲಿ ಅವರಿಗೆ ತಕ್ಕ ಜೊತೆಗಾರರು ಸಿಗಲಿಲ್ಲ.

ಮುಷ್ಫೀಕುರ್ ರಹೀಮ್ (36; 95 ನಿ., 66 ಎ., 2 ಬೌಂಡರಿ) ಅವರು ತಡಬಡಾಯಿಸಿದ್ದ ಬಾಂಗ್ಲಾ ಇನಿಂಗ್ಸ್‌ಗೆ ಒಂದಿಷ್ಟು ಚೇತನ ನೀಡಿದರು.ಜಯದ ಆಸೆ ಹೊಂದಿರದಿದ್ದರೂ ಬಾಂಗ್ಲಾಕ್ಕೆ ಪೈಪೋಟಿ ನೀಡುವ ಉತ್ಸಾಹ ತೋರಿದ ಐರ್ಲೆಂಡ್ 45 ಓವರುಗಳಲ್ಲಿ 178ರನ್ ಗಳಿಸಿ, ಆಲ್‌ಔಟ್ ಆಯಿತು. ನೀಲ್ ಓಬ್ರಿಯನ್ ಮತ್ತು ಕೆವಿನ್ ಓಬ್ರಿಯನ್ ಅವರು ಬಾಂಗ್ಲಾ ಬೌಲರ್‌ಗಳು ಚಡಪಡಿಸುವಂತೆ ಮಾಡಿದರು. ಆದರೆ ಶಫಿವುಲ್ ಇಸ್ಲಾಮ್, ಶಕೀಬ್ ಅಲ್ ಹಸನ್ ಹಾಗೂ ಮೊಹಮ್ಮದ್ ಅಶ್ರಫುಲ್ ಅವರು ಐರ್ಲೆಂಡ್ ತಂಡವು ಗೆಲುವಿನ ದಡದತ್ತ ಸಾಗದಂತೆ ತಡೆದರು.ಸ್ಕೋರು ವಿವರ

ಬಾಂಗ್ಲಾದೇಶ: 49.2 ಓವರುಗಳಲ್ಲಿ 205

ತಮೀಮ್ ಸಿ ವಿಲಿಯಮ್ ಪೋಟರ್‌ಫೀಲ್ಡ್ ಬಿ ಬೊಥಾ 44

 ಕಯೇಸ್ ಸ್ಟಂಪ್ಡ್ ನೀಲ್ ಓಬ್ರಿಯನ್ ಬಿ  ಮೂನಿ  12

ಜುನೈದ್ ಸಿದ್ದಿಕ್ ರನ್‌ಔಟ್ (ಎಡ್ ಜಾಯ್ಸಿ)  03

ಮುಷ್ಪೀಕುರ್ ಸಿ ಆ್ಯಂಡ್ರ್ಯೂ ವೈಟ್ ಬಿ ಡಾಕ್ರೆಲ್  36

ಶಕೀಬ್ ಅಲ್ ಹಸನ್ ಸಿ ಮತ್ತು ಬಿ ಆ್ಯಂಡ್ರೆ ಬೊಥಾ  16

ರಕೀಬುಲ್ ಹಸನ್ ರನ್‌ಔಟ್ (ಆ್ಯಂಡ್ರ್ಯೂ ವೈಟ್)  38

ಅಶ್ರಫುಲ್ ಸಿ ಆ್ಯಂಡ್ರ್ಯೂ ವೈಟ್ ಬಿ  ಡಾಕ್ರೆಲ್  01

ನಯೀಮ್ ಸಿ ಜಾರ್ಜ್ ಡಾಕ್ರೆಲ್ ಬಿ ಜಾನ್‌ಸ್ಟನ್  29

ಶಫಿವುಲ್  ಎಲ್‌ಬಿಡಬ್ಲ್ಯು ಬಿ ಆ್ಯಂಡ್ರೆ ಬೊಥಾ  02

ಅಬ್ದುರ್ ರಜಾಕ್ ಬಿ ಟ್ರೆಂಟ್ ಜಾನ್‌ಸ್ಟನ್  11

ರುಬೆಲ್ ಹುಸೇನ್ ಔಟಾಗದೆ  02

ಇತರೆ (ಬೈ-2, ವೈಡ್-8, ನೋಬಾಲ್-1)  11ವಿಕೆಟ್ ಪತನ: 1-53 (ಇಮ್ರುಲ್ ಕಯೇಸ್; 6.3); 2-61 (ಜುನೈದ್ ಸಿದ್ದಿಕ್; 8.5); 3-68 (ತಮೀಮ್ ಇಕ್ಬಾಲ್; 11.1); 4-86 (ಶಕೀಬ್ ಅಲ್ ಹಸನ್; 15.2); 5-147 (ಮುಷ್ಪೀಕುರ್ ರಹೀಮ್; 33.3); 6-151 (ಮೊಹಮ್ಮದ್ ಅಶ್ರಫುಲ್; 35.2); 7-159 (ರಕೀಬುಲ್ ಹಸನ್; 38.1); 8-170 (ಶಫಿವುಲ್ ಇಸ್ಲಾಮ್; 42.3); 9-193 (ಅಬ್ದುರ್ ರಜಾಕ್; 47.6); 10-205 (ನಯೀಮ್ ಇಸ್ಲಾಮ್; 49.2).ಬೌಲಿಂಗ್: ಬಾಯ್ಡಾ ರಂಕಿನ್ 9-0-62-0 (ವೈಡ್-4), ಟ್ರೆಂಟ್ ಜಾನ್‌ಸ್ಟನ್ 8.2-0-40-2 (ನೋಬಾಲ್-1), ಜಾನ್ ಮೂನಿ 7-0-25-1 (ವೈಡ್-1), ಆ್ಯಂಡ್ರೆ ಬೊಥಾ 9-1-32-3 (ವೈಡ್-1), ಜಾರ್ಜ್ ಡಾಕ್ರೆಲ್ 10-2-23-2, ಪಾಲ್ ಸ್ಟಿರ್ಲಿಂಗ್ 4-0-13-0, ಕೆವಿನ್ ಓಬ್ರಿಯನ್ 2-0-8-0ಐರ್ಲೆಂಡ್: 45 ಓವರುಗಳಲ್ಲಿ 178

ವಿಲಿಯಮ್ ಪೋಟರ್‌ಫೀಲ್ಡ್ ಸಿ ರಕೀಬುಲ್ ಹಸನ್ ಬಿ ಶಕೀಬ್ ಅಲ್ ಹಸನ್ 20

ಪಾಲ್ ಸ್ಟಿರ್ಲಿಂಗ್ ಸ್ಟಂಪ್ಡ್ ಮುಷ್ಪೀಕುರ್ ರಹೀಮ್ ಬಿ ಅಬ್ದುರ್ ರಜಾಕ್  09

ಎಡ್ ಜಾಯ್ಸ್ ಸಿ ಮತ್ತು ಬಿ ಮೊಹಮ್ಮದ್ ಅಶ್ರಫುಲ್ 16

ನೀಲ್ ಓಬ್ರಿಯನ್ ಸಿ ತಮೀಮ್ ಬಿ ಶಕೀಬ್ ಅಲ್ 38

ಆ್ಯಂಡ್ರೆ ವೈಟ್ ಬಿ ಮೊಹಮ್ಮದ್ ಅಶ್ರಫುಲ್  10

ಕೆವಿನ್ ಓಬ್ರಿಯನ್ ಸಿ ಸುಹ್ರಾವಾಡಿ ಶುವೊ (ಬದಲಿ ಆಟಗಾರ) ಬಿ ಶಫಿವುಲ್ ಇಸ್ಲಾಮ್  37

ಆ್ಯಂಡ್ರೆ ಬೊಥಾ ಬಿ ಶಫಿವುಲ್ ಇಸ್ಲಾಮ್  22

ಜಾನ್ ಮೂನಿ ಬಿ ನಯೀಮ್ ಇಸ್ಲಾಮ್  00

 ಜಾನ್‌ಸ್ಟನ್ ಎಲ್‌ಬಿಡಬ್ಲ್ಯು ಬಿ ಶಫಿವುಲ್ ಇಸ್ಲಾಮ್  06

ಜಾರ್ಜ್ ಡಾಕ್ರೆಲ್ ಔಟಾಗದೆ  04

ಬಾಯ್ಡೆ ರಂಕಿನ್ ಸಿ ಜುನೈದ್ ಸಿದ್ದಿಕ್ ಬಿ ಶಫಿವುಲ್ ಇಸ್ಲಾಮ್  03

ಇತರೆ: (ಲೆಗ್‌ಬೈ-9, ವೈಡ್-4)  13ವಿಕೆಟ್ ಪತನ: 1-23 (ಪಾಲ್ ಸ್ಟಿರ್ಲಿಂಗ್; 5.3); 2-36 (ವಿಲಿಯಮ್ ಪೋಟರ್‌ಫೀಲ್ಡ್; 9.1); 3-75 (ಎಡ್ ಜಾಯ್ಸ್; 18.1); 4-93 (ಆ್ಯಂಡ್ರೆ ವೈಟ್; 24.4); 5-110 (ನೀಲ್ ಓಬ್ರಿಯನ್; 27.4); 6-151 (ಕೆವಿನ್ ಓಬ್ರಿಯನ್; 36.4); 7-164 (ಜಾನ್ ಮೂನಿ; 39.4); 8-168 (ಆ್ಯಂಡ್ರೆ ಬೊಥಾ; 40.1); 9-171 (ಟ್ರೆಂಟ್ ಜಾನ್‌ಸ್ಟನ್; 42.1); 10-178 (ಬಾಯ್ಡೆ ರಂಕಿನ್; 44.6).ಬೌಲಿಂಗ್: ಶಫಿವುಲ್ ಇಸ್ಲಾಮ್ 8-1-21-4 (ವೈಡ್-2), ಅಬ್ದುರ್ ರಜಾಕ್ 8-0-30-1, ನಯೀಮ್ ಇಸ್ಲಾಮ್ 9-1-36-1, ಶಕೀಬ್ ಅಲ್ ಹಸನ್ 8-0-28-2 (ವೈಡ್-1), ಮೊಹಮ್ಮದ್ ಅಶ್ರಫುಲ್ 9-0-42-2 (ವೈಡ್-1), ರುಬೆಲ್ ಹುಸೇನ್ 3-0-12-0ಫಲಿತಾಂಶ: ಬಾಂಗ್ಲಾದೇಶಕ್ಕೆ 27 ರನ್‌ಗಳ ಗೆಲುವು.

ಪಂದ್ಯ ಶ್ರೇಷ್ಠ: ತಮೀಮ್ ಇಕ್ಬಾಲ್ (ಬಾಂಗ್ಲಾದೇಶ).

                 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry