ಸೋಮವಾರ, ಮಾರ್ಚ್ 8, 2021
26 °C

ಕಸದಲ್ಲಿ ರಸ, ಕಸವೋ ಕಸ

ಕೆ.ಎಸ್.ರಾಜಾರಾಮ್ Updated:

ಅಕ್ಷರ ಗಾತ್ರ : | |

ಕಸದಲ್ಲಿ ರಸ, ಕಸವೋ ಕಸ

ಉದ್ಯಾನನಗರಿ, ಸಿಲಿಕಾನ್‌ಸಿಟಿ, ಕೈಗಾರಿಕಾ ಸ್ವರ್ಗ ಇತ್ಯಾದಿ ವಿಶೇಷಣಗಳನ್ನು ಹೊತ್ತ ಬೆಂಗಳೂರಿಗೆ ‘ಕಸ’ದ ಗುಣವಾಚಕವೂ ಅಂಟಿರುವ ವಿಚಾರ ವಿಶೇಷವೇನಲ್ಲ.ಕಸದಲ್ಲಿ ರಸ ಹುಡುಕುವ, ಚಿಕ್ಕಪುಟ್ಟ ತ್ಯಾಜ್ಯಗಳನ್ನೇ ಹೆಕ್ಕಿ, ಚೀಲಕ್ಕೆ ತುಂಬಿಸಿಕೊಂಡು ಗುಜರಿಗೆ ಮಾರಿ ತಮ್ಮ ಹಸಿದ  ಹೊಟ್ಟೆ ತುಂಬಿಸಿಕೊಂಡು ಜೀವನ ಮಾಡುವವರ ಸಂಖ್ಯೆಯೂ ಸಾಕಷ್ಟಿದೆ.ಇಂಥ ಹೊಟ್ಟೆ ಕಿವಿಚುವ ದೃಶ್ಯವನ್ನು ಮಟಮಟ ಮಧ್ಯಾಹ್ನ ಸೆರೆ ಹಿಡಿದವರು ನುರಿತ ಛಾಯಾಗ್ರಾಹಕ ಮತ್ತು ಪತ್ರಕರ್ತ ಎಚ್.ಎಸ್.ಬ್ಯಾಕೋಡ. ಪತ್ರಿಕಾ ಛಾಯಾಚಿತ್ರ ವಿಭಾಗದಲ್ಲಿ ಈ ಬಗೆಯ ಸುದ್ದಿ– ಮಾಹಿತಿಯ ಛಾಯಾಚಿತ್ರಗಳಿಗೆ ವಿಶೇಷ ಸ್ಥಾನವಿದೆ. ಇವು ಓದುಗರ, ಅಧಿಕಾರಿಗಳ ಮತ್ತು ಸರ್ಕಾರದ ಕಣ್ತೆರೆಸಿಯಾವು ಎಂದು ಎಲ್ಲರೂ ನಿರೀಕ್ಷಿಸುತ್ತಾರೆ.ಈ ಚಿತ್ರ ತೆಗೆಯಲು ಬಳಕೆಯಾದ ಕ್ಯಾಮೆರಾ ನಿಕಾನ್ 300, ಅಪರ್ಚರ್ ಎಫ್ 5,    ಲೆನ್ಸ್  55  ಎಂಎಂ,   ಶಟರ್ ಸ್ಪೀಡ್ 1/250,  ಐಎಸ್ಒ 400  ಮತ್ತು ಮ್ಯಾನ್ಯುಯಲ್ ಫೋಕಸ್.ಛಾಯಾಚಿತ್ರದ ಅನುಸಂಧಾನದ ವಿವರ ಇಂತಿದೆ...

* ಈ ಬಗೆಯ ಛಾಯಾಚಿತ್ರಗಳು    ಸುದ್ದಿ ಚಿತ್ರಗಳಾಗಿ ಬಳಕೆಯಾಗುತ್ತವೆ. ವಾಸ್ತವ ಬಿಂಬಿಸಲು ಛಾಯಾಗ್ರಾಹಕ ಹೆಚ್ಚು ಗಮನ ನೀಡಬೇಕಾಗುತ್ತದೆ.* ಕ್ಯಾಮೆರಾದ ಗುಣಮಟ್ಟ, ಫೋಕಸ್ ಮತ್ತು ಎಕ್ಸ್‌ಪೋಷರ್‌ನಲ್ಲಿ ಹೊಂದಾಣಿಕೆ ಸಲ್ಲದು. ಈ ಚಿತ್ರದಲ್ಲಿ ಈ ಮೂರೂ ಸಂಗತಿಗಳ ಸಂಯೋಜನೆ ಛಾಯಾಗ್ರಾಹಕನ ಅನುಭವ ಬಿಂಬಿಸುತ್ತದೆ.* ಚೌಕಟ್ಟಿನಲ್ಲಿರುವ ತ್ಯಾಜ್ಯ ವಸ್ತುಗಳ ರಾಶಿ ನೋಡಿದರೆ ಎಷ್ಟೋ ದಿನದಿಂದ ಕಸ ಅದೇ ಸ್ಥಳದಲ್ಲಿ ಬಿದ್ದಿರುವಂತೆ ಭಾಸವಾಗುತ್ತದೆ.* ಬಡ ಹುಡುಗನ ಎತ್ತರವೇ ಕಸದ ರಾಶಿಗೆ ಅಳತೆ ಪಟ್ಟಿಯಾಗಿ ಕಾಣುವುದು ಛಾಯಾಗ್ರಾಹಕನ ಜಾಣತನವನ್ನು ಬಿಂಬಿಸುತ್ತದೆ.* ಈ ಬಗೆಯ ಛಾಯಾಚಿತ್ರಗಳಲ್ಲಿ   ಕಲಾತ್ಮಕ ಗುಣಗಳನ್ನು ಹುಡುಕುವುದು ಮುಖ್ಯವಲ್ಲ. ಆದಾಗ್ಯೂ ಛಾಯಾಚಿತ್ರ ಗ್ರಹಣದ ಮೂಲಾಂಶಗಳನ್ನು  ಯಾವುದೇ ಪೋಸ್ಟ್ ಪ್ರೋಸೆಸಿಂಗ್ ತಂತ್ರಗಳನ್ನು ಅಳವಡಿಸದೇ ಚಂದಗಾಣಿಸಿರುವುದು ಶ್ಲಾಘನೀಯ ಸಂಗತಿ. 

ಇಮೇಲ್: hsbyakod@gmail.com

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.