ಕಸದ ತೊಟ್ಟಿಯೋ ಉದ್ಯಾನವೋ?

7

ಕಸದ ತೊಟ್ಟಿಯೋ ಉದ್ಯಾನವೋ?

Published:
Updated:

ಚಾಮರಾಜಪೇಟೆ ವಿಧಾನಸಭಾ ವ್ಯಾಪ್ತಿಯ ವಾರ್ಡ್ ನಂ. 139ರ ಗೂಡ್ ಶೆಡ್ ರೋಡ್‌ನ ಮಗ್ಗಲಲ್ಲಿರುವ ಭಕ್ಷಿ ಗಾರ್ಡನ್ ಪ್ರದೇಶದಲ್ಲಿರುವ ಸಾರ್ವಜನಿಕ ಉದ್ಯಾನವನ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.ಉದ್ಯಾನವನದ ಸ್ಥಿತಿಯ ಬಗ್ಗೆ ಬಿಬಿಎಂಪಿ ಹೆಲ್ಪ್‌ಲೈನ್‌ಗೆ ಕರೆ ಮಾಡಿ ವಿವರಿಸಿದರೆ, `ನಿಮ್ಮ ದೂರಿನ ಸಂಖ್ಯೆ 88265 (2012ರ ಮೇ 5ರಂತೆ).ನಿಮ್ಮ ದೂರನ್ನು ತೋಟಗಾರಿಕೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾಗಪ್ಪ ಅವರಿಗೆ ವರ್ಗಯಿಸಲಾಗಿದೆ~ ಎಂದು ಹೇಳುತ್ತಾರೆ. ನಾಗಪ್ಪ ಅವರನ್ನು ವಿಚಾರಿಸಿದರೆ, ಉದ್ಯಾನವನವನ್ನು ಶುಚಿ ಮಾಡಲು ಪಾಲಿಕೆ ವತಿಯಿಂದ ಟೆಂಡರ್ ಕರೆಯಬೇಕು. ಅಲ್ಲಿಯವರೆಗೂ ಏನೂ ಮಾಡಲು ಆಗುವುದಿಲ್ಲ ಎಂದು ಪ್ರತಿಕ್ರಿಯಿಸುತ್ತಾರೆ.ಈ ಉದ್ಯಾನವನದ ಆಸುಪಾಸಿನಲ್ಲಿ ಪೌರ ಕಾರ್ಮಿಕರ ಆರೋಗ್ಯ ಇಲಾಖೆ, ದೇವಸ್ಥಾನ, ಶಾಲೆ, ಮನೆಗಳು, ಮುಖ್ಯರಸ್ತೆಯೂ ಇದೆ. ಇಲ್ಲಿ ಗಬ್ಬು ವಾಸನೆ ಬೀರುತ್ತಿದ್ದರೂ ಪಾಲಿಕೆ ಅಧಿಕಾರಿಗಳಿಗಾಗಲಿ, ಜನ ಪ್ರತಿನಿಧಿಗಳಿಗಾಗಲಿ ಉದ್ಯಾನವನದ ಅಭಿವೃದ್ಧಿಯತ್ತ ಗಮನಹರಿಸಿಲ್ಲ. ಇದಕ್ಕೆ ಮುಕ್ತಿ ಎಂದು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry