ಕಸದ ರಾಶಿಗೆ ಬೆಂಕಿ- ಶಾಲಾ ಕಾಂಪೌಂಡ್‌ಗೆ ಹಾನಿ

7

ಕಸದ ರಾಶಿಗೆ ಬೆಂಕಿ- ಶಾಲಾ ಕಾಂಪೌಂಡ್‌ಗೆ ಹಾನಿ

Published:
Updated:

ಬೆಂಗಳೂರು: ನಗರದ ಇನ್‌ಫೆಂಟ್ರಿ ರಸ್ತೆ ಸಮೀಪದ ಕಾವರ್ಲಿ ರಸ್ತೆಯ ಟನ್‌ಬ್ರಿಡ್ಜ್ ಪ್ರೌಢಶಾಲೆಯ ಕಾಂಪೌಂಡ್ ಬಳಿ ಸಂಗ್ರಹವಾಗಿದ್ದ ಕಸದ ರಾಶಿಗೆ ಭಾನುವಾರ ಬೆಂಕಿ ಹಚ್ಚಿದ್ದ ಪರಿಣಾಮ ಶಾಲೆಯ ಕಾಂಪೌಂಡ್ ಮತ್ತು ಶಾಲೆಯ ಆವರಣದ ಶೆಡ್‌ಗೆ ಬೆಂಕಿ ತಗುಲಿದೆ.`ಶಾಲೆಯ ಕಾಂಪೌಂಡ್ ಬಳಿ ಕಳೆದ ನಾಲ್ಕೈದು ದಿನಗಳಿಂದ ಕಸ ಸಂಗ್ರಹವಾಗಿತ್ತು. ಭಾನುವಾರ ಬೆಳಿಗ್ಗೆ ಕಸದ ರಾಶಿಗೆ ಬೆಂಕಿ ಹಾಕಲಾಗಿದೆ. ಇದರಿಂದ ಕಾಂಪೌಂಡ್ ಮತ್ತು ಶೆಡ್‌ಗೆ ಹಾನಿಯಾಗಿದೆ. ಸಮೀಪವೇ ಇರುವ ಶಾಲೆಯ ಅಡುಗೆ ಕೋಣೆಯಲ್ಲಿ ಎಲ್‌ಪಿಜಿ ಸಿಲೆಂಡರ್ ಇತ್ತು. ಬೆಂಕಿ ಹೆಚ್ಚು ವ್ಯಾಪಿಸಿದ್ದರೆ ಸಿಲಿಂಡರ್ ಸ್ಫೋಟಿಸುವ ಅಪಾಯವಿತ್ತು' ಎಂದು ಶಾಲೆಯ ಮುಖ್ಯಸ್ಥೆ ಮೌರೀನಾ ಓಜಾ ಹೇಳಿದರು.`ಬೆಂಕಿ ಕಂಡ ಕೂಡಲೇ ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದೆವು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು' ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry