ಶುಕ್ರವಾರ, ಮೇ 7, 2021
20 °C

ಕಸಬರಿಗೆ ಮಾರಾಟವೇ ಜೀವನಾಧಾರ

ಬಸವರಾಜ ಪಟ್ಟಣಶೆಟ್ಟಿ Updated:

ಅಕ್ಷರ ಗಾತ್ರ : | |

`ಉದರ ನಿಮಿತ್ತ್ಯಂ ಬಹುಕೃತ ವೇಷಂ~ ಎಂಬ ನಾನ್ನುಡಿಗೆ ಅನುಗು ಣವಾಗಿ ಜನತೆ ಉಪಜೀವನ ಸಾಗಿಸಲು ವಿವಿಧ ವೃತ್ತಿಗಳಲ್ಲಿ ನಿರತರಾಗಿ ಹೊಟ್ಟಿ ಹೊರೆದು  ಕೊಳ್ಳುತ್ತಿದ್ದಾರೆ. ಕೊರಮ ಜನಾಂಗಕ್ಕೆ ಸೇರಿದವರು ಕಸಬರಿಗೆ ಮಾರಾಟದಲ್ಲಿ ನಿರತರಾಗಿದ್ದಾರೆ.ಪ್ರಾಚೀನ ಕಾಲದಿಂದಲೇ ಈಚಲು ಬರಿಗೇ ಹಾಗೂ ಮೆದೆ ಹುಲ್ಲುಗಳಿಂದ ತಯಾರಿಸುವ ಕಸಬರಿಗೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿತ್ತು. ಇಂದಿನ ಆಧುನಿಕ ಯುಗದಲ್ಲಿ ತಯಾ ರಾಗುತ್ತಿರುವ ಕಂಪೆನಿ ಕಸಬರಿ ಗೆಗಳಿಂದಾಗಿ ಇವರ ಕಸಬರಿಗೆಗಳಿಗೆ ಬೆಲೆ ಇಲ್ಲದಂತಾಗಿದೆ.ಕೊಪ್ಪಳ ಜಿಲ್ಲೆಯ ಲಿಂಗನಬಂಡಿ ಗ್ರಾಮಕ್ಕೆ ಸೇರಿದ ಈ ಕೊರಮರು ಕಸಬರಿಗೆ ತಯಾರಿಕೆಗೆ ಬೇಕಾಗುವ ಬಾರ್ಲ್‌ ಅನ್ನು ಆಂಧ್ರಪ್ರದೇಶದ ಬೇತ ಮಚರ್ಲಾ,ನನ್‌ಚರ್ಲಾ ಹಾಗೂ ಮಂತ್ರಾಲಯ, ಎಮ್ಮಿಗನೂರು ಪ್ರದೇಶಗಳಿಂದ ತರಿಸುತ್ತಾರೆ. ಒಂದು ಲಾರಿ ಬಾರ್ಲ್‌ಗೆ 15ಸಾವಿರಕ್ಕೂ ಅಧಿಕ ಹಣವನ್ನು ವೆಚ್ಚಮಾಡಬೇಕಾಗುತ್ತದೆ. ಅದರಿಂದ 2ರಿಂದ 3ಸಾವಿರ ಕಸಬರಿಗೆಗಳನ್ನು ತಯಾರಿಸುತ್ತಾರೆ ವರ್ಷವಿಡೀ ರಾಜ್ಯದಾದ್ಯಂತ ಸಂಚಾರ ಮಾಡುತ್ತಾ ಕಸಬರಿಗೆಗಳನ್ನು ಮಾರಾಟ ಮಾಡಿ ಅಲ್ಪ ಆದಾಯ ದಿಂದ ಜೀವನ ನಿರ್ವಹಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಜೋಳ, ಗೋಧಿಯನ್ನು ಪಡೆದು ಸಹ ಕಸಬರಿಗೆ ನೀಡುತ್ತಾರೆ. ವರ್ಷವಿಡೀ ಸಂಚಾರ ಕೈಗೊಳ್ಳುವುದರಿಂದ ಇವರ ಮಕ್ಕಳು ಶಿಕ್ಷಣದಿಂದ ಹಾಗೂ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಇವರ ಜನಾಂಗದಲ್ಲಿ ಬೆರಳಣಿಕೆಯಷ್ಟು ಜನರು ಮಾತ್ರ ಪದವಿ ಹಂತದವರೆಗೆ ಶಿಕ್ಷಣ ಪಡದಿದ್ದಾರೆ.ಸರ್ಕಾರದ ವಿವಿಧ ಸೌಕರ್ಯಗಳಿಂದ ವಂಚಿತರಾಗಿರುವ ಇವರಿಗೆ ಸಮರ್ಪಕ ಸೌಲಭ್ಯಗಳು ದೊರಕದೆ ಇರುವುದರಿಂದ ಜೀವನ ನಿರ್ವಹಣೆ ಕಠಿಣವಾಗಿ ಪರಿಣಮಿಸಿದೆ. ಇವರು ಗ್ರಾಮದಲ್ಲಿದ್ದರೆ ಮಾತ್ರ ಪಡಿತರ ಚೀಟಿ ಹೊಂದಬಹುದು.`ಕೊರಮ ಜನಾಂಗದವರು ಅತೀ ಸಂಕಷ್ಟದ ಪರಸ್ಥಿತಿಯಲ್ಲಿದ್ದೇವೆ. ನಮ್ಮನ್ನು ಗ್ರಾಮೀಣ ಪ್ರದೇಶಗಳಲ್ಲಿ ಊರ ಕೊರವರು ಎಂದು ಕರೆಯು ತ್ತಾರೆ~ ಎಂದು ಈ ಜನಾಂಗದ ಮಹಿಳೆ ಯರಾದ ದೇವಮ್ಮ  ಮತ್ತು ಮಲಕವ್ವ ಹೇಳುತ್ತಾರೆ.ಪ್ರತಿವರ್ಷ ಲಿಂಗನಬಂಡಿ ಗ್ರಾಮ ದಲ್ಲಿ ನಡೆಯುವ ಹುಲಿಗೆಮ್ಮ ದೇವಿಯ ಜಾತ್ರೆಯಲ್ಲಿ ಸಮಾಜದವರು ಕೂಡಿ ಕೊಂಡು ಜಾತ್ರೆಯನ್ನು ಆಚರಿಸುತ್ತಾರೆ. ನಂತರ ಕಸಬರಿಗೆ ಮಾರಾಟ ವೃತ್ತಿಗೆ ತೆರಳುತ್ತಾರೆ.ಇಂದಿನ ಆಧುನಿಕ ಯುಗದ ಅಬ್ಬರಕ್ಕೆ ಸಿಲುಕಿ ತಾವು ತಯಾರಿಸುವ ಸಾಂಪ್ರದಾಯಕ ಹುಲುಬರಿಗೆ, ಈಚಲು ಬರಿಗೆ, ಕಸಬರಿಗೆಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವುದರಿಂದ ತಮ್ಮ ಜೀವನ ನಿರ್ವಹಣೆಗೆ ಕಸಬರಿಗೆ ಮಾರಾಟದ ಆದಾಯ ಸಾಕಾಗದೆ ಇರುವುದರಿಂದ ಸರ್ಕಾರ ತಮಗೆ ಉದ್ಯೋಗ ಕೈಗೊಳ್ಳಲು ಪರ್ಯಾಯ ಅವಕಾಶಗಳನ್ನು ಕಲ್ಪಿಸಬೇಕು ಎಂದು ಇವರು ಮನವಿ ಮಾಡುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.