ಸೋಮವಾರ, ಏಪ್ರಿಲ್ 19, 2021
32 °C

ಕಸಾಪ ಪದಾಧಿಕಾರಿಗಳ ಮರು ಆಯ್ಕೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕಕ್ಕೆ ಈಚೆಗೆ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣವಾಗಿ ಅವೈಜ್ಞಾನಿಕವಾಗಿ ಕೂಡಿದೆ ಎಂದು ವಿವಿಧ ಸಂಘಟನೆಗಳು ಆರೋಪ ಮಾಡಿವೆ.ಈ ಸಂಬಂಧ ಬುಧವಾರ ತಾಲ್ಲೂಕಿನ ಹಾನಗಲ್ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಕಾರ್ಯಕರ್ತರು, ಆಯ್ಕೆ ಸಭೆಯನ್ನು ಸೂಕ್ತ ಪ್ರಚಾರ ಇಲ್ಲದೇ ಮಾಡಲಾಗಿದೆ, ಸಾಕಷ್ಟು ಸಮಯವಿದ್ದರೂ ತುರ್ತಾಗಿ ಹಮ್ಮಿಕೊಳ್ಳಲಾಗಿದೆ. ಪರಿಷತ್ ಸದಸ್ಯರಿಗೆ ಈ ಬಗ್ಗೆ ಮಾಹಿತಿ ಲಭ್ಯವಾಗದ ಪರಿಣಾಮ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಆರೋಪ ಮಾಡಿದರು.ಹೆಚ್ಚಿನ ಸದಸ್ಯರು ಭಾಗವಹಿಸದ ಪರಿಣಾಮ ತಮಗೆ ಬೇಕಾದವರಿಗೆ ಅಧಿಕಾರ ನೀಡಲಾಗಿದೆ. ಈಗಾಗಲೇ ಅಧಿಕಾರದಲ್ಲಿ ಇದ್ದವರಿಗೆ ಮತ್ತೆ ಅಧಿಕಾರ ನೀಡಲಾಗಿದೆ. ಭಾಷೆ ಜ್ಞಾನ ಇಲ್ಲದವರಿಗೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡದವರಿಗೆ ಉತ್ತಮ ಹುದ್ದೆಗಳನ್ನು ನೀಡುವ ಮೂಲಕ ಅರ್ಹ ವ್ಯಕ್ತಿಗಳನ್ನು ಕಡೆಗಣಿಸಲಾಗಿದೆ. ಮೇಲ್ನೋಟಕ್ಕೆ ಇದು ಪೂರ್ವ ನಿಯೋಜಿತ ಕೆಲಸ ಎಂದು ಬಿಂಬಿತವಾಗಿದೆ ಎಂದು ದೂರಿದರು.ಕೂಡಲೇ, ಜಿಲ್ಲಾ ಅಧ್ಯಕ್ಷರು ಇತ್ತ ಗಮನಹರಿಸಬೇಕು ಹಾಗೂ ಮಾಡಿರುವ ಆಯ್ಕೆಯನ್ನು ರದ್ದು ಮಾಡಿ ಸರ್ವ ಸದಸ್ಯರ ಸಮ್ಮುಖದಲ್ಲಿ ಮರು ಆಯ್ಕೆ ಮಾಡಬೇಕು ಹಾಗೂ ಈ ಕುರಿತು ಆಗಿರುವ ಗೊಂದಲ ನಿವಾರಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.ಚಿತ್ರ ನಿರ್ದೇಶಕ ಜಿ. ಶ್ರೀನಿವಾಸ ಮೂರ್ತಿ, ಕರವೇ ಅಧ್ಯಕ್ಷ ಬಸಣ್ಣ, ಉಪನ್ಯಾಸಕರಾದ ವಿಜಯ್, ಗೋವಿಂದಪ್ಪ, ಹಾವನೂರ್ ವೇದಿಕೆ ಸಂಚಾಲಕ ರೇವಣ್ಣ, ಡಿಎಸ್‌ಎಸ್ ಸಂಚಾಲಕ ರಾಯಾಪುರ ನಾಗೇಂದ್ರಪ್ಪ, ಬಾಲರಾಜ್, ಲೋಕೇಶ್ ಪಲ್ಲವಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.