ಕಸಾಬ್ ವಾದ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್

7

ಕಸಾಬ್ ವಾದ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್

Published:
Updated:

ನವದೆಹಲಿ (ಐಎಎನ್‌ಎಸ್): ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರಿದ ಸಂಚಿನಲ್ಲಿ ತಾನು ಭಾಗಿಯಾಗಿರದೆ, ಕೇವಲ ಇದನ್ನು ಜಾರಿಗೊಳಿಸುವ ಪ್ರತಿನಿಧಿಯಾಗಿದ್ದೆ ಎಂಬ ಮುಂಬೈ ದಾಳಿಯ ಆರೋಪಿ ಮತ್ತು ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಾಬ್‌ನ ವಾದವನ್ನು ಒಪ್ಪಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿತು.“ಭಾರತೀಯ ಕಡಲ ತೀರದಲ್ಲಿ ನೆಲೆಯೂರುವ ಮುನ್ನವೇ ನಿನಗೆ ಎಲ್ಲವೂ ತಿಳಿದಿತ್ತು ಮತ್ತು ಇದಕ್ಕಾಗಿ ತಯಾರಾಗಿಯೂ ಬಂದಿದ್ದೆ” ಎಂದು ಕೋರ್ಟ್ ತಿರುಗೇಟು ನೀಡುವ ಮೂಲಕ ಕಸಾಬ್‌ನ ಬಾಯಿ ಮುಚ್ಚಿಸಿತು.ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಮತ್ತು ಸಿ.ಕೆ. ಪ್ರಸಾದ್ ಅವರನ್ನೊಳಗೊಂಡ ನ್ಯಾಯಪೀಠವು ಕಸಾಬ್‌ನ ವಾದವನ್ನು `ನಂಬಲಾಗದ್ದು ಮತ್ತು ಊಹಿಸಲಾಗದ್ದು~ ಎಂದು ತಳ್ಳಿಹಾಕಿತು. ಕಸಾಬ್ ಪರವಾಗಿ ಕೋರ್ಟ್‌ನಿಂದ ನೇಮಕವಾದ ವಕೀಲ ರಾಜು ರಾಮಚಂದ್ರನ್ ವಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry