ಕಸಾಯಿಖಾನೆಗೆ ರಾಸುಗಳ ಸಾಗಣೆ: ಲಾರಿ ವಶ, ಮೂವರ ಬಂಧನ

7

ಕಸಾಯಿಖಾನೆಗೆ ರಾಸುಗಳ ಸಾಗಣೆ: ಲಾರಿ ವಶ, ಮೂವರ ಬಂಧನ

Published:
Updated:

ಚನ್ನರಾಯಪಟ್ಟಣ: ಕಸಾಯಿಖಾನೆಗೆ ರಾಸುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಸಮರ ಸೇನೆ ಕಾರ್ಯಕರ್ತರು ರಾಸುಗಳ ಸೇಮತ ವಾಹನವನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

ರಾಸುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸಮರ ಸೇನೆಯ ಅಧ್ಯಕ್ಷ ನವೀನ್‌ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಕಾದು ಲಾರಿಯನ್ನು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಲಾರಿಯಲ್ಲಿ ಗಂಡಸಿಯಿಂದ ಬೆಂಗಳೂರಿನ ಕಸಾಯಿಖಾನೆಗೆ 44 ರಾಸುಗಳನ್ನು ಸಾಗಿಸಲಾಗುತ್ತಿತ್ತು. 

ಮಂಡ್ಯ ಜಿಲ್ಲೆ ಇಂಡಿವಾಳು ಗ್ರಾಮದ ಲಾರಿ ಚಾಲಕ ಮಧು, ಅರುಣ್‌ಕುಮಾರ್, ಗಂಡಸಿ ಹೋಬಳಿ ಮಹದೇವರಹಳ್ಳಿಯ ಶಿವಣ್ಣ ಅವರನ್ನು ಬಂಧಿಸಲಾಗಿದೆ.

ರಾಸುಗಳನ್ನು ಮೈಸೂರಿನ ಪಿಂಜಿರೋಪೋಲ್‌ನಲ್ಲಿನ ಗೋಶಾಲೆಗೆ ಕಳುಹಿಸಿಕೊಡಲಾಗಿದೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry