ಬುಧವಾರ, ಜನವರಿ 22, 2020
28 °C

ಕಸ್ತೂರಿ ರಂಗನ್‌ ವರದಿಗೆ ಬೃಂದಾ ಕಾರಟ್‌ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ (ಕೊಡಗು ಜಿಲ್ಲೆ): ‘ಅರಣ್ಯ ದಲ್ಲಿ ವಾಸವಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವಂತೆ ಶಿಫಾರಸು ಮಾಡಿ ರುವ ಕಸ್ತೂರಿ ರಂಗನ್‌ ವರದಿಯನ್ನು ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ಸರ್ಕಾರಗಳೂ ಅನುಷ್ಠಾನಗೊಳಿಸ ಬಾರದು’ ಎಂದು ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಬೃಂದಾ ಕಾರಟ್‌ ಒತ್ತಾಯಿಸಿದರು.ಸಿದ್ದಾಪುರದ ಸ್ವರ್ಣಮಾಲ ಸಭಾಂ ಗಣದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಆದಿವಾಸಿ– ಬುಡ ಕಟ್ಟು ಜನರ 2ನೇ ರಾಜ್ಯ ಸಮಾವೇ ಶವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.‘ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಜನರ ಅಭಿಪ್ರಾಯವನ್ನು ಪಡೆಯದೇ ಕೇಂದ್ರ ಸರ್ಕಾರವು ಏಕಮುಖವಾಗಿ ಕಸ್ತೂರಿ ರಂಗನ್‌ ವರದಿಯನ್ನು ಅಂಗೀ ಕರಿಸಿರುವುದು ಖಂಡನಾರ್ಹ. ಕೇಂದ್ರ ಸರ್ಕಾರ ತಕ್ಷಣ ಈ ವರದಿಯನ್ನು ಹಿಂದಕ್ಕೆ ಪಡೆಯಬೇಕು’ ಎಂದು ಅವರು ಆಗ್ರಹಿಸಿದರು.‘ತಲತಲಾಂತರದಿಂದ ಅರಣ್ಯದಲ್ಲಿ ವಾಸಿಸು ತ್ತಿರುವ ನಮ್ಮನ್ನು ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಇಂದು ನಾವು ನೋಡುವ ಅರಣ್ಯವನ್ನು ಸರ್ಕಾರ ವಾಗಲಿ ಅಥವಾ ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಿಸಿಲ್ಲ. ಅಲ್ಲಿ ವಾಸವಿ ರುವ ಅರಣ್ಯವಾಸಿಗಳೇ ಅದನ್ನು ಇಲ್ಲಿ ಯವರೆಗೆ ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಆದಿವಾಸಿಗಳಿಗೆ ಅರ ಣ್ಯವೇ ಮನೆ ಇದ್ದಂತೆ. ಈಗ ನಮ್ಮನ್ನು ನಮ್ಮ ಮನೆಯಿಂದ ಹೊರದಬ್ಬುವ ಪ್ರಯತ್ನ ನಡೆದಿದೆ’ ಎಂದು ಕಿಡಿ ಕಾರಿದರು.‘ಅರಣ್ಯವಾಸಿಗಳು ಅರಣ್ಯದಲ್ಲಿಯೇ ಇರಬೇಕು ಎನ್ನುವ ಎಡಪಕ್ಷಗಳ ಒತ್ತಾಯಕ್ಕೆ ಮಣಿದ ಯುಪಿಎ ಸರ್ಕಾ ರವು 2006ರಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಆದರೆ, ಈ ಕಾಯ್ದೆಯನ್ನು ಕರ್ನಾ ಟಕದಲ್ಲಿದ್ದ ಬಿಜೆಪಿ ಸರ್ಕಾರ ಜಾರಿಗೆ ತರಲು ಉತ್ಸಾಹ ತೋರಲಿಲ್ಲ’ ಎಂದು ಅವರು ಆರೋಪಿಸಿದರು.

ಪ್ರತಿಕ್ರಿಯಿಸಿ (+)