ಕಸ ಪುನರ್‌ಬಳಕೆ: ನಗರದಲ್ಲಿ ಜನಜಾಗೃತಿಗೆ ನಿರ್ಧಾರ

7

ಕಸ ಪುನರ್‌ಬಳಕೆ: ನಗರದಲ್ಲಿ ಜನಜಾಗೃತಿಗೆ ನಿರ್ಧಾರ

Published:
Updated:

ಬೆಂಗಳೂರು: ಬಿಬಿಎಂಪಿಯು ಪ್ರತಿ ವಾರ್ಡ್‌ಗಳಿಗೆ ಶ್ರೇಣಿ ನೀಡುವ ಮೂಲಕ ಶೇ 20ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಸಿ ತ್ಯಾಜ್ಯ ವಿಂಗಡಣೆಯಾಗುತ್ತಿರುವ  ವಾರ್ಡ್‌ಗಳತ್ತ ಗಮನ ಕೇಂದ್ರೀಕರಿಸಲು ನಿರ್ಧರಿಸಿದೆ.ಬಿಬಿಎಂಪಿ ಹಾಗೂ ರಾಜಾಜಿನಗರ ಇಂಡಸ್ಟ್ರೀಸ್ ಅಸೋಸಿಯೇಷನ್ ರಾಜಾಜಿನಗರ ಕೈಗಾರಿಕಾ ವಸಾಹತು ಪ್ರದೇಶದ ಉದ್ಯಮಿಗಳಲ್ಲಿ ಕಸ ವಿಂಗಡಣೆ ಹಾಗೂ ಅದರ ಪುನರ್ ಬಳಕೆ ಬಗ್ಗೆ ಅರಿವು ಮೂಡಿಸಲು ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಈ ವಿಷಯ ಪ್ರಕಟಿಸಿದರು.`ನಗರದಲ್ಲಿ ಎಲ್ಲೆಲ್ಲಿ ಶೇ 20ಕ್ಕಿಂತ ಕಡಿಮೆ ಪ್ರಮಾಣದಲ್ಲಿ ತ್ಯಾಜ್ಯ ವಿಂಗಡಣೆಯಾಗುತ್ತಿದೆಯೋ ಅಂತಹ ವಾರ್ಡ್‌ಗಳತ್ತ ಹೆಚ್ಚಿನ ಗಮನಹರಿಸುವ ಮೂಲಕ ಹಸಿ ತ್ಯಾಜ್ಯ ವಿಂಗಡಣೆಗೆ ಇನ್ನಷ್ಟು ಒತ್ತು ನೀಡಲಾಗುವುದು~ ಎಂದು ಅವರು ತಿಳಿಸಿದರು.`ಬೊಮ್ಮನಹಳ್ಳಿ ವಲಯದಲ್ಲಿ ಶೇ 10ಕ್ಕಿಂತ ಕಡಿಮೆ ಪ್ರಮಾಣದಲ್ಲಿ ತ್ಯಾಜ್ಯ ವಿಂಗಡಣೆಯಾಗುತ್ತಿದೆ. ಈ ವಲಯದಲ್ಲಿ ಪರಿಣಾಮಕಾರಿಯಾಗಿ ತ್ಯಾಜ್ಯ ವಿಂಗಡಣೆ ಮಾಡಲು ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ~ ಎಂದರು.ಕಸ ತಳ್ಳುವ ಗಾಡಿಯಿಂದ ನೇರ ಲಾರಿಗೆ:

ಹೊಸ ಟೆಂಡರ್ ವ್ಯವಸ್ಥೆ ಜಾರಿಗೆ ಬಂದ ನಂತರ ಪೌರ ಕಾರ್ಮಿಕರು ಮನೆ-ಮನೆಗಳಿಂದ ಸಂಗ್ರಹಿಸುವ ಕಸ ನೆಲ ತಾಗಬಾರದು. ಹೀಗೆ ಸಂಗ್ರಹಿಸುವ ಕಸವನ್ನು ತಳ್ಳುವ ಗಾಡಿಗಳಿಂದ ನೇರವಾಗಿ ಲಾರಿಗಳಿಗೆ ಪೂರೈಸುವ ಮೂಲಕ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.ಪ್ರತಿ ದಿನ ಎಷ್ಟು ಮನೆಗಳಲ್ಲಿ ಪೌರ ಕಾರ್ಮಿಕರು ಕಸ ಸಂಗ್ರಹಿಸಿದ್ದಾರೆ ಎಂಬ ಬಗ್ಗೆ ಚೀಟಿಯಲ್ಲಿ ಗುರುತು ಮಾಡಲು ಹೊಸ ಟೆಂಡರ್‌ನಲ್ಲಿ ಗುತ್ತಿಗೆದಾರರಿಗೆ ಷರತ್ತು ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.ಸ್ಥಳೀಯ ಪಾಲಿಕೆ ಸದಸ್ಯ ಗಂಗಭೈರಯ್ಯ ಮಾತನಾಡಿ, `ಹೋಟೆಲ್ ಹಾಗೂ ಸಮುದಾಯ ಭವನಗಳಲ್ಲಿ ಸಂಗ್ರಹವಾಗುವ ಕಸವನ್ನು ಕಡ್ಡಾಯವಾಗಿ ವಿಂಗಡಿಸುವ ಮೂಲಕ ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿಸಲು ಉದ್ಯಮಿಗಳು ಸಹಕರಿಸಬೇಕು~ ಎಂದು ಕೋರಿದರು.`ಕಾಸಿಯಾ~ ಗೌರವ ಕಾರ್ಯದರ್ಶಿ ಎಸ್.ಎನ್. ಈಶ್ವರ್, ರಾಜಾಜಿನಗರ ಇಂಡಸ್ಟ್ರೀಸ್ ಅಸೋಸಿಯೇಷನ್‌ನ ಅಧ್ಯಕ್ಷ ವಿ.ಕೆ. ದೀಕ್ಷಿತ್, ಪಾಲಿಕೆ ಪಶ್ಚಿಮ ವಲಯದ ಹೆಚ್ಚುವರಿ ಆಯುಕ್ತ ಡಾ.ಕೆ.ಎನ್. ಚಂದ್ರಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry