ಕಾಂಕ್ರೀಟ್ ಸ್ಥಾವರ ಬೇಕೇ?

7

ಕಾಂಕ್ರೀಟ್ ಸ್ಥಾವರ ಬೇಕೇ?

Published:
Updated:

ತುಮಕೂರು ಜಿಲ್ಲೆಯ ಸಿದ್ಧಗಂಗೆಯಲ್ಲಿ 121 ಅಡಿ ಎತ್ತರ ಶಿವಲಿಂಗ ಸ್ಥಾಪನೆಗೆ ಶಿವಕುಮಾರ ಸ್ವಾಮಿಗಳು ಒಪ್ಪಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ (ಪ್ರ. ವಾ. ಫೆ. 2).`ಸ್ಥಾವರಕ್ಕಳಿವುಂಟು - ಜಂಗಮಕ್ಕಳಿವಿಲ್ಲ~ ಎಂಬ ಬಸವಣ್ಣನವರ ವಚನವನ್ನು ಸಾವಿರಾರು  ಮಕ್ಕಳಿಂದ ನಿತ್ಯ  ಬೆಳಿಗ್ಗೆ ಮತ್ತು ಸಂಜೆ ಧ್ವನಿ ವರ್ಧಕದಲ್ಲಿ ಮುಗಿಲು ಮುಟ್ಟುವಂತೆ ಘಂಟಾಘೋಷ ಮಾಡಿಸುವ ಮಠದ ಶ್ರೀಗಳು  ಕಾಂಕ್ರಿಟ್ ಸ್ಥಾವರ ಸ್ಥಾಪನೆಗೆ ಒಪ್ಪಿಗೆ ಸೂಚಿಸುವುದು ದ್ವಂದ್ವವಲ್ಲವೆ?ಸ್ವಾಮೀಜಿಯವರು ಪರಿಹಾರ ಸೂಚಿಸಲೇಬೇಕಾದ ಘನ ಗಂಭೀರ ಸಮಸ್ಯೆಗಳು ಸಾಕಷ್ಟಿವೆ, ಅದಕ್ಕಾಗಿ ಸಾವಿರಾರು ಭಕ್ತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry