ಶನಿವಾರ, ನವೆಂಬರ್ 23, 2019
18 °C

ಕಾಂಗ್ರೆಸ್,ಬಿಜೆಪಿ ತಿರಸ್ಕರಿಸಿ: ಎಚ್‌ಡಿಕೆ

Published:
Updated:

ಶಿರಹಟ್ಟಿ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಧಿಕಾರ ಚುಕ್ಕಾಣಿ ಹಿಡಿದ 24 ಗಂಟೆಯೊಳಗೆ ಎಲ್ಲ ರೈತರ ಸಾಲಮನ್ನಾ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಘೋಷಿಸಿದರು.ಬುಧವಾರ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಜರುಗಿದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ದಲ್ಲಿ ಮಾತನಾಡಿದರು. ವಿಧವೆಯರಿಗೆ ್ಙ1500  75 ವರ್ಷ ಮೀರಿದ ವೃದ್ಧರಿಗೆ ರೂ 5000, ಅಂಗವಿಕಲರಿಗೆ ರೂ 2500, ಮಗುವಿಗೆ ಪೌಷ್ಟಿಕ ಆಹಾರ ನೀಡಲು ಗರ್ಭೀಣಿರಿಗೆ  ಒಂದು ವರ್ಷ ಪ್ರತಿ ತಿಂಗಳು ್ಙ5000 ರೂ ಗಳನ್ನು ನೀಡುವುದಾಗಿ ಭರವಸೆ ನೀಡಿದರು.ಜೆಡಿಎಸ್ ಅಧಿಕಾರದಲ್ಲಿದ್ದಾಗ ಜಾರಿಗೆಗೊಳಿಸಿದ್ದ ಹಲವಾರು ಜನಪರ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿದೆ. ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಡ ಜನರ ವಿರೋಧಿ ಧೋರಣೆಗಳನ್ನು ಹೊಂದಿರುವ ಅವುಗಳನ್ನು ತಿರಸ್ಕರಿಸಿ. ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದರ ಮೂಲಕ ಜೆಡಿಎಸ್ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು. ರೈತ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರ ಅಗತ್ಯವಿದೆ. ಸುಗ್ನಳ್ಳಿ ಗ್ರಾಮ ವಾಸ್ತವ್ಯ ಮಾಡುವ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ ಎಂದು ಹೇಳಿದರು.ಮಾಜಿ ಸಚಿವ ಬಸವರಾಜ ಹೊರಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ತಿಪ್ಪಣ್ಣ ಕೊಂಚಿಗೇರಿ, ಜೆಡಿಎಸ್ ಅಭ್ಯರ್ಥಿ ಗುರಪ್ಪ ವಡ್ಡರ, ಅಂದಾನಯ್ಯ ಕುರ್ತಕೋಟಿಮಠ, ದಾವಲ್‌ಸಾಬ್ ಮುಳಗುಂದ, ಹಿರೇಮನಿ ಪಾಟೀಲ, ನಜೀರ್ ಡಂಬಳ, ಪಟ್ಟಣ ಪಂಚಾಯಿತ ಸದಸ್ಯ ಸಿ.ಕೆ. ಮುಳ ಗುಂದ, ರಮೇಶ ಕಲಬುರ್ಗಿ ಉಪಸ್ಥಿತರಿದ್ದರು.ಜೆಡಿಎಸ್ ಪರ ಪ್ರಚಾರ

ಗಜೇಂದ್ರಗಡ
: ಜನವಿರೋಧಿ  ನೀತಿಗಳನ್ನು ಹೊಂದಿರುವ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಿರಸ್ಕರಿಸಿ ಅಭಿವೃದ್ಧಿ ಪರ ಕಾಳಜಿಯನ್ನು ಹೊಂದಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲ್ಲುವಿಗೆ ಪ್ರಜ್ಞಾವಂತ ಮತದಾರರು ಶ್ರಮಿಸಬೇಕು. ಅಂದಾಗ ಮಾತ್ರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಹೇಳಿದರು.ನಗರದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಉತ್ತರ ಕರ್ನಾಟಕದ ಪಾತ್ರ ಅತ್ಯಂತ ಮಹತ್ವದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಅಲೆ ಇದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಷ್ಟ್ರೀಯ ಪಕ್ಷಗಳ ದುರಾಡಳಿತಕ್ಕೆ ಇತಿಶ್ರೀ ಹಾಡಬೇಕು ಎಂದು ಕರೆ ನೀಡಿದರು.ರಾಷ್ಟ್ರೀಯ ಪಕ್ಷಗಳ ಜನವಿರೋಧಿ ನೀತಿ ಗಳಿಂದಾಗಿ ರಾಜ್ಯದಲ್ಲಿ ಬಡತನ, ನಿರುದ್ಯೋಗ ತಾಂಡವಾಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯದ ಸಂಪತ್ತನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕೊಳ್ಳೆ ಹೊಡೆದಿವೆ. ಹೀಗಾಗಿ ರಾಜ್ಯದ ಜನತೆ ಸಂಕಷ್ಟದ ಸುಳಿಗೆ ಸಿಲುಕಿ  ತತ್ತರಿಸಿ ಹೋಗಿದ್ದಾರೆ. ಸಾಲದ ಶೂಲಕ್ಕೆ ಸಿಲುಕಿ ಜೀವ ನ್ಮರಣದ ಹೋರಾಟ ನಡೆಸುವಂತಹ ದುಸ್ಥಿತಿ ಯನ್ನು ರಾಜ್ಯದ ಜನತೆಗೆ  ರಾಷ್ಟ್ರೀಯ ಪಕ್ಷಗಳು ಸೃಷ್ಠಿಸಿವೆ ಎಂದು ವಾಗ್ದಾಳಿ ನಡೆಸಿದರು.ಅಭಿನಂದನೆ: ಪಕ್ಷದ ಹಿತದೃಷ್ಟಿಯಿಂದ ಬಿಫಾರಂ ತ್ಯಾಗ ಮಾಡಿದ ರಾಜ್ಯ ಯುವ ಜನತಾದಳದ ಉಪಾಧ್ಯಕ್ಷ ಡಾ.ಮಂಜುನಾಥ ವಿಶ್ವಬ್ರಾಹ್ಮಣರಿಗೆ ಅಭಿನಂದನೆ ಸಲ್ಲಿಸಿದ ಕುಮಾರಸ್ವಾಮಿ ಅವರು ಈ ಹಿಂದಿನ ಚುನಾವಣೆಗಳಲ್ಲಿ ರೋಣ ಕ್ಷೇತ್ರದಿಂದ ಟಿಕೆಟ್ ಪಡೆದ ಜೆಡಿಎಸ್ ಅಭ್ಯರ್ಥಿಗಳು ಚುನಾವಣೆಯ ಬಳಿಕ ಪಕ್ಷ ಸಂಘಟನೆಗೆ ಕನಿಷ್ಠ ಪ್ರಯತ್ನ ಮಾಡ ಲಿಲ್ಲ. ಜೊಳ್ಳುಗಳು ಹೊರ ಹೋಗಿವೆ.

ಸದ್ಯ ಗಟ್ಟಿಗಳು ಮಾತ್ರ ಪಕ್ಷದಲ್ಲಿವೆ. ಹೀಗಾಗಿ ಟಿಕೆಟ್ ನೀಡದಿದ್ದಕ್ಕೆ ಪಕ್ಷ ತೊರೆದ ಮುಖಂಡ ರಿಗಿಂತ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಪಕ್ಷ ನೀಡಿದ ಜವಾಬ್ದಾರಿ ಯನ್ನು ಸಮರ್ಥವಾಗಿ ನಿಭಾಯಿಸಿ ಕೊಂಡು ಹೋಗುತ್ತಿರುವ ಡಾ.ಮಂಜುನಾಥ ಅವರಿಗೆ ಪಕ್ಷ ಋಣಿಯಾಗಿರುತ್ತದೆ ಎಂದರು.

ಪ್ರತಿಕ್ರಿಯಿಸಿ (+)