ಕಾಂಗ್ರೆಸ್‌ಗೆ ಜೋಗ-ಕಾರ್ಗಲ್ ಪ.ಪಂ. ಗದ್ದುಗೆ

7

ಕಾಂಗ್ರೆಸ್‌ಗೆ ಜೋಗ-ಕಾರ್ಗಲ್ ಪ.ಪಂ. ಗದ್ದುಗೆ

Published:
Updated:

ಕಾರ್ಗಲ್:  ಜೋಗ-ಕಾರ್ಗಲ್ ಪ.ಪಂ. ಅಧ್ಯಕ್ಷರಾಗಿ ಈಚೆಗೆ ಕಾಂಗ್ರೆಸ್‌ನ ರಾಜು ಈಚೆಗೆ ಅವಿರೋಧವಾಗಿ ಆಯ್ಕೆಯಾದರು.ಕಳೆದ ಜನವರಿಯಲ್ಲಿ ಬಿಜೆಪಿಯಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸರೋಜಾ ಅವರ ವಿರುದ್ಧ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಹಾಗಾಗಿ, ಸರೋಜಾ ಅಧಿಕಾರದಿಂದ ಕೆಳಗಿಳಿದಿದ್ದರು. ಅಧ್ಯಕ್ಷರ ಸ್ಥಾನಕ್ಕೆ ಫೆ. 18ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯ ರಾಜು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಅಧಿಪತ್ಯ ಸ್ಥಾಪನೆಗೆ ಕಾರಣರಾದರು.ಕೊನೆಕ್ಷಣದಲ್ಲಿ ನಾಮಪತ್ರ ಸಲ್ಲಿಸಿ, ಅಧ್ಯಕ್ಷ ಸ್ಥಾನಕ್ಕೆ ಸರೋಜಾ ಪೈಪೋಟಿ ನಡೆಸಿದರೂ ಅಧಿಕಾರದ ಗದ್ದುಗೆ ಏರುವಲ್ಲಿ ವಿಫಲರಾದರು. ಬಿಜೆಪಿಯ 5 ಸದಸ್ಯರು, ಕಾಂಗ್ರೆಸ್‌ನ 4, ಜೆಡಿಎಸ್ 1, ಕನ್ನಡಸೇನೆಯ 2 , ಪಕ್ಷೇತರ 1 ಅಭ್ಯರ್ಥಿಗಳು ಅವಿರೋಧವಾಗಿ ರಾಜು ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು. ನಾಮನಿರ್ದೇಶಿತ ಸದಸ್ಯರಾದ ಮುನಿರಾಜ್ ಜೈನ್, ವಿಜಯ ಗುಂಡಪ್ಪ ಹಾಜರಿದ್ದರು. ಸಾಗರದ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿಗಳು ಪ.ಪಂ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry