ಕಾಂಗ್ರೆಸ್‌ಗೆ ನಮ್ಮನ್ನು ಎದುರಿಸುವ ತಾಕತ್ತಿಲ್ಲ: ನರೇಂದ್ರ ಮೋದಿ

7

ಕಾಂಗ್ರೆಸ್‌ಗೆ ನಮ್ಮನ್ನು ಎದುರಿಸುವ ತಾಕತ್ತಿಲ್ಲ: ನರೇಂದ್ರ ಮೋದಿ

Published:
Updated:

ಭೋಪಾಲ್‌/ಗಾಂಧಿನಗರ (ಐಎ ಎನ್‌ಎಸ್‌ ): ಕಾಂಗ್ರೆಸ್‌ ಪಕ್ಷವು ಬಿಜೆಪಿ ವಿರುದ್ಧ ಹೋರಾಡುವ ಸಾಮರ್ಥ್ಯ  ಕಳೆದುಕೊಂಡಿದೆ ಎಂದಿರುವ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ, ‘ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಗಳನ್ನು ಸಿಬಿಐ ಎದುರಿಸಲಿದೆಯೇ ಹೊರತೂ ಕಾಂಗ್ರೆಸ್‌ ಅಲ್ಲ’ ಎಂದು ಲೇವಡಿ ಮಾಡಿದರು.ಕಾಂಗ್ರೆಸ್‌ ಪಕ್ಷವು ತನ್ನ ಎದುರಾಳಿಗಳನ್ನು ಮಣಿಸಲು ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಬಿಜೆಪಿ ಆರೋಪ. ಈ ಅರ್ಥದಲ್ಲಿ ಮೋದಿ  ಮೇಲಿನ ಟೀಕೆ ಮಾಡಿದ್ದಾರೆ.ಭೋಪಾಲ್‌ನಲ್ಲಿ ಬುಧವಾರ ಪಕ್ಷದ ಕಾರ್ಯಕರ್ತರ ಬೃಹತ್‌ ಸಮಾವೇಶದಲ್ಲಿ (ಕಾರ್ಯಕರ್ತ ಮಹಾಕುಂಭ್‌ ) ಮಾತನಾಡಿ, ಕೇಂದ್ರದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಕೆಳಗಿಳಿಸುವಂತೆ ಕರೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry