ಮಂಗಳವಾರ, ಜೂನ್ 15, 2021
20 °C

ಕಾಂಗ್ರೆಸ್‌ನಿಂದ ಆರ್ಥಿಕ ದುಃಸ್ಥಿತಿ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ದೇಶದ ಹಿತ ಕಾಪಾಡದೇ, ಭ್ರಷ್ಟಾ ಚಾರ, ಹಗರಣ, ಆರ್ಥಿಕ ದುಃಸ್ಥಿತಿಗೆ ಕಾರಣರಾಗಿ ಭಾರತದ ಗೌರವವನ್ನು ಮಣ್ಣು ಪಾಲು ಮಾಡಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ಸಮರ್ಥ ನಾಯಕ ನರೇಂದ್ರ ಮೋದಿಯನ್ನು ಈ ಬಾರಿ ಪ್ರಧಾನಮಂತ್ರಿ ಮಾಡಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ  ಕರೆ ನೀಡಿದರು.ಪಟ್ಟಣದ ಎಂ.ಜಿ. ಹಾಲ್ ನಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮರ್ಥ ಯಜಮಾನನಿಲ್ಲದ ಮನೆಯಂತೆ, ದೇಶಕ್ಕೆ ಸಮರ್ಥ ನಾಯಕನಿಲ್ಲದೇ ದೇಶದ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಯುಪಿಎ ಸರ್ಕಾರವೇ ನಮ್ಮ ಮುಂದಿನ ಜ್ವಲಂತ ಸಾಕ್ಷಿ ಎಂದು ಟೀಕಿಸಿದರು.ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊ ಳಿಸಿತ್ತು. ಆದರೆ ಅವುಗಳನ್ನು ಮುಂದುವರಿಸದೇ ಜನರಿಗೆ ದ್ರೋಹ ಮಾಡಲಾಗಿದೆ ಎಂದು ಆರೋಪಿಸಿದರು.ಬಿಜೆಪಿ ಘೋಷಿತ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ,  ಉಡುಪಿ–ಚಿಕ್ಕಮಗಳೂರು ಜಿಲ್ಲೆ ಯಲ್ಲಿ ನಕ್ಸಲರ ಚಟುವಟಿಕೆ, ಎಂಡೋಸಲ್ಫಾನ್ ಪೀಡಿತರ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆ ಗಳಿಗೆ ಬಿಜೆಪಿ ನೇತೃತ್ವದ ಸರ್ಕಾರ ಮಾನವೀಯ ನೆಲೆಯಲ್ಲಿ ಪರಿಹಾರ ಕಲ್ಪಿಸುವಲ್ಲಿ ಮುಂದಾ ಗಿತ್ತು. ಆದರೆ ಅದನ್ನು ಕಾಂಗ್ರೆಸ್ ತಮ್ಮದೆಂದು ಬಿಂಬಿಸುಕೊಳ್ಳುತ್ತಾ ಸಮರ್ಥವಾಗಿ ಮುಂದು ವರಿಸಲು ಸಾಧ್ಯವಾಗದೇ ಜನರಿಗೆ ಸಮಸ್ಯೆಯ ನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಎನ್. ಜೀವರಾಜ್, ಮಾಜಿ ಶಾಸಕರಾದ  ಡಿ.ಎಸ್. ಸುರೇಶ್, ಟಿ.ಎಚ್.ಶಿವಶಂಕರಪ್ಪ, ಪಕ್ಷದ ಮುಖಂಡರಾದ ಆರ್.ದೇವಾನಂದ್, ಎನ್. ಮಂಜುನಾಥ್ ಇನ್ನಿತರರು ಮಾತನಾಡಿದರು.ತಾಲ್ಲೂಕು ಬಿಜೆಪಿ ಅಧ್ಯಕ್ಷ ಕರಕುಚ್ಚಿ ಮೋಹನ್, ಟಿ.ಎಂ.ಭೋಜರಾಜ್, ಅವಿನಾಶ್, ಪ್ರೇಮ ಕುಮಾರ್, ಸದಾನಂದ್, ಚಂದ್ರಕಲಾ, ಶ್ಯಾಮಲ ಇನ್ನಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.