`ಕಾಂಗ್ರೆಸ್‌ನಿಂದ ಪಾರದರ್ಶಕ ಆಡಳಿತ'

ಮಂಗಳವಾರ, ಜೂಲೈ 23, 2019
20 °C

`ಕಾಂಗ್ರೆಸ್‌ನಿಂದ ಪಾರದರ್ಶಕ ಆಡಳಿತ'

Published:
Updated:

ರಾಜರಾಜೇಶ್ವರಿನಗರ: `ಉತ್ತಮ ಆಡಳಿತ ನೀಡಲೆಂದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು, ಜನರ ಆಶಯದಂತೆ ಪಾರದರ್ಶಕ, ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು' ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.ವಿನಾಯಕನಗರದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್ ಅನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಮಾತನಾಡಿದರು. `ಸರ್ಕಾರಿ ಅಧಿಕಾರಿಗಳು ನಿಷ್ಠೆ  ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ' ಎಂದು ತಿಳಿಸಿದರು. ಪಂಚಾಯ್ತಿ ಸದಸ್ಯ ವಿ.ವೇಣುಗೋಪಾಲ್, ಎಪಿಎಂಸಿ ಸದಸ್ಯ ಪಂಚಲಿಂಗಯ್ಯ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry