ಕಾಂಗ್ರೆಸ್‌ನಿಂದ ವಿವಿಧ ಸವಲತ್ತು ವಿತರಣೆ

7

ಕಾಂಗ್ರೆಸ್‌ನಿಂದ ವಿವಿಧ ಸವಲತ್ತು ವಿತರಣೆ

Published:
Updated:

ರಾಜರಾಜೇಶ್ವರಿನಗರ: ರಾಹುಲ್ ಗಾಂಧಿ ಯುವ ವೇದಿಕೆ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಇಲ್ಲಿನ ಹಿರಿಯ ನಾಗರಿಕರಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಕಾಂಗ್ರೆಸ್ ವಕ್ತಾರ ಎಸ್.ಟಿ. ಸೋಮಶೇಖರ್ ಮಾತನಾಡಿ, `ಜಾತಿ- ಧರ್ಮದ ಹೆಸರಿನಲ್ಲಿ ಸಮಾಜವನ್ನು ಛೀದ್ರ ಮಾಡಿ ಅಭಿವೃದ್ಧಿ ಹೆಸರಿನಲ್ಲಿ ಕಪ್ಪು ಹಣ ಮಾಡುವುದೇ ಬಿಜೆಪಿಯ ಅಜೆಂಡಾ ಆಗಿದೆ~ ಎಂದು ದೂರಿದರು.ಕೆಪಿಸಿಸಿ ಸದಸ್ಯಪಿ.ಎನ್. ಕೃಷ್ಣಮೂರ್ತಿ, ರಾಜರಾಜೇಶ್ವರಿನಗರ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್‌ಕುಮಾರ್, ರಾಹುಲ್‌ಗಾಂಧಿ ಯುವ ವೇದಿಕೆ ಅಧ್ಯಕ್ಷ ಅರುಣ್‌ಕುಮಾರ್, ಎಸ್‌ಸಿ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಎನ್.ರಾಜಕುಮಾರ್, ವಾರ್ಡ್ ಅಧ್ಯಕ್ಷ ಶ್ರೀನಿವಾಸ್, ಹಿಂದುಳಿದ ವಿಭಾಗದ ಅಧ್ಯಕ್ಷ ಚಂದ್ರು, ಮುಖಂಡರಾದ ಪ್ರಸನ್ನ, ಪ್ರವೀಣ್, ರಾಹುಲ್ ಗಾಂಧಿ ಯುವ ವೇದಿಕೆ ಸಲಹೆಗಾರ ಸತ್ಯ ಪ್ರಕಾಶ್, ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಎಂ.ಸಿ.ವೇಣುಗೋಪಾಲ್ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry