ಸೋಮವಾರ, ಮಾರ್ಚ್ 1, 2021
31 °C

ಕಾಂಗ್ರೆಸ್‌–ಆರ್‌ಜೆಡಿ ಮೈತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌–ಆರ್‌ಜೆಡಿ ಮೈತ್ರಿ

ಪಟ್ನಾ (ಐಎಎನ್ಎಸ್): ಏಳು–ಬೀಳುಗಳನ್ನೇ ಕಾಣುತ್ತಿದ್ದ ಕಾಂಗ್ರೆಸ್‌ ಮತ್ತು ರಾಷ್ಟ್ರೀಯ ಜನತಾದಳ  (ಆರ್‌ಜೆಡಿ)  ಮೈತ್ರಿ ಬಗೆಗಿನ ಅನಿಶ್ಚಿತತೆ ಕೊನೆಗೊಂಡಿದೆ. ಕಾಂಗ್ರೆಸ್‌–ಆರ್‌ಜೆಡಿ ಒಟ್ಟುಗೂಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವು­ದಾಗಿ ಬುಧವಾರ ಅಧಿಕೃತವಾಗಿ ಘೋಷಿಸಿವೆ. ಕಾಂಗ್ರೆಸ್‌, ಆರ್‌ಜೆಡಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಲಾಲು ಪ್ರಸಾದ್‌  ಈ ವಿಷಯ ಬಹಿರಂಗಪಡಿಸಿದರು.

‘ಬಿಹಾರದಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಮತ್ತು ಎನ್‌ಸಿಪಿ ಮೈತ್ರಿಕೂಟ  ಚುನಾವಣೆ ಎದುರಿಸಲಿದೆ. ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ನಮ್ಮ ಶಕ್ತಿಯನ್ನು ದೃಢಪಡಿಸಲಿದ್ದೇವೆ’ ಎಂದು ಲಾಲು ಹೇಳಿದರು.‘ಸ್ಥಾನ ಹಂಚಿಕೆ ಒಪ್ಪಂದ ಪ್ರಕಾರ ಇಲ್ಲಿನ ಒಟ್ಟು 40 ಲೋಕಸಭೆ ಸ್ಥಾನಗಳಲ್ಲಿ ಕಾಂಗ್ರೆಸ್‌ 12, ಎನ್‌ಸಿಪಿ 1 ಮತ್ತು ಉಳಿದ 27 ಸ್ಥಾನಗಳಲ್ಲಿ  ಆರ್‌ಜೆಡಿ ಸ್ಪರ್ಧಿಸುವುದು ಖಚಿತವಾಗಿದೆ’ ಎಂದು ತಿಳಿಸಿದರು.‘ಅಧಿಕಾರಕ್ಕಾಗಿ ಕೋಮು ಸಂಘಟ­ನೆ­ಗಳು ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಇದು ದೇಶಕ್ಕೆ ಅತಿ ದೊಡ್ಡ ಅಪಾಯ ಮುನ್ಸೂಚನೆಯಾ­ಗಿದ್ದು, ಇದನ್ನು ತಡೆಯಲು ನಾವೆಲ್ಲ ಪ್ರಯತ್ನಿಸಬೇಕು’ ಎಂದರು.ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಚೌಧರಿ ಮಾತನಾಡಿ, ಕೋಮುಶಕ್ತಿಗಳನ್ನು ಮಟ್ಟಹಾಕಬೇಕು ಎಂಬುದು ನಮ್ಮ ಮೈತ್ರಿಯ ಪ್ರಮುಖ ಉದ್ದೇಶ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.