ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಸಮಿತಿ: ರಾಜ್ಯಕ್ಕೆ ವಯಲಾರ್‌ ರವಿ

7

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಸಮಿತಿ: ರಾಜ್ಯಕ್ಕೆ ವಯಲಾರ್‌ ರವಿ

Published:
Updated:

ನವದೆಹಲಿ (ಪಿಟಿಐ): ಲೋಕಸಭೆ ಚುನಾವಣೆಗೆ ಸಾಕಷ್ಟು ಮೊದಲೇ ಅಭ್ಯರ್ಥಿ ಪಟ್ಟಿಯನ್ನು ಸಿದ್ಧಪಡಿಸುವು­ದಕ್ಕಾಗಿ ಕಾಂಗ್ರೆಸ್‌ ಎಲ್ಲ ರಾಜ್ಯಗಳ ಆಯ್ಕೆ ಸಮಿತಿಯನ್ನು ರಚಿಸಿದೆ. ಎಐಸಿಸಿ ಕಾರ್ಯದರ್ಶಿಗಳನ್ನು ಆಯ್ಕೆ ಸಮಿತಿ ಸದಸ್ಯರನ್ನಾಗಿ ಮಾಡಿದ್ದು ಅವರ ನೇತೃತ್ವದಲ್ಲಿ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರು ಇತರ ಸದಸ್ಯರಾಗಿರುತ್ತಾರೆ.ಕರ್ನಾಟಕ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳ ಸಮಿತಿಗೆ ವಯ­ಲಾರ್‌ ರವಿ ಅವರನ್ನು ನೇಮಿ­ಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ. ರಾಜ್ಯದ ಇನ್ನೊಬ್ಬ ನಾಯಕ ಆಸ್ಕರ್‌ ಫರ್ನಾಂಡಿಸ್‌ ಅವರು ಒಡಿಶಾ, ಛತ್ತೀಸಗಡ ಮತ್ತು ಜಾರ್ಖಂಡ್‌ ರಾಜ್ಯ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ.ಈ ತಿಂಗಳ ಕೊನೆಯೊಳಗೆ 150–200 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಕಾಂಗ್ರೆಸ್‌ ಉತ್ಸುಕವಾಗಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry