ಭಾನುವಾರ, ಜೂನ್ 13, 2021
21 °C

ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಲಗಿ: ‘ಜಾತಿವಾದಿ ಮತ್ತು ಅವಕಾಶವಾದಿ ರಾಜಕೀಯ ಮಾಡುತ್ತಿರುವ ಸುರೇಶ ಅಂಗಡಿ ಅವರನ್ನು ಸೋಲಿಸಿ, ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು’ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು.ಸಮೀಪದ ನಾಗನೂರ ಗ್ರಾಮದಲ್ಲಿ ಜರುಗಿದ ಬೆಳಗಾವಿ ಲೋಕಸಭಾ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ ಅವರ ಪ್ರಚಾರಾರ್ಥ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಕಳೆದ ಎರಡು ಅವಧಿಯಲ್ಲಿ ಅಂಗಡಿ ಅವರು ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಿಲ್ಲ. ಕೇವಲ ಸುಳ್ಳು ಆಶ್ವಾಸನೆ ನೀಡಿ ಜನರನ್ನು ವಂಚಿಸಿದ್ದಾರೆ. ಜಾರಕಿಹೊಳಿ ಕುಟುಂಬವು ಎಲ್ಲ ಜನರನ್ನು ಒಟ್ಟಾಗಿ ಪರಿಗಣಿಸಿ ತಾಲ್ಲೂಕಿನಲ್ಲಿ ಸೌಹಾರ್ದತೆಯನ್ನು ಬೆಳೆಸಿದೆ. ಅಭಿವೃದ್ಧಿ ಮತ್ತು ಅಧಿಕಾರ ಹಂಚಿಕೆಯಲ್ಲಿ ಎಂದಿಗೂ ಪಕ್ಷಪಾತ ಮಾಡಿಲ್ಲ ಎಂದು ಹೇಳಿದರು.ಸಿದ್ಧರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದ ಆಗಬೇಕು ಎಂದರು.ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ ಅವರನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಬೇಕು ಎಂದರು ಮನಿವ ಮಾಡಿಕೊಂಡರು.

ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ ಮಾತನಾಡಿ ವೀರಶೈವ ಸಮಾಜಕ್ಕೆ ಸೇರಿದ ನನ್ನನ್ನು ಮರಾಠಿಗರೆಂದು ಸುರೇಶ ಅಂಗಡಿ ಬಿಂಬಿಸುತ್ತಿದ್ದು, ಇದು ಅವರು ಸೋಲಿನ ಅಂಜಿಕೆಯಿಂದ ಹತಾಶೆಯ ಮಾತುಗಳಾಗಿವೆ ಎಂದರು.ಬೆಳಗಾವಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ತಮಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಬಸಗೌಡ ಪಾಟೀಲ, ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ಅವರ ಬೆಂಬಲ ನೀಡಬೇಕು ಎಂದರು.ಶಂಕರಗೌಡ ಪಾಟೀಲ, ಡಾ. ರಾಜೇಂದ್ರ ಸಣ್ಣಕ್ಕಿ, ಟಿ.ಆರ್. ಕಾಗಲ್, ಶಂಕರ ಬಿಲಕುಂದಿ, ಭೀಮಶಿ ಗಡಾದ, ಸುಭಾಷ ಢವಳೇಶ್ವರ, ಭೀಮಶಿ ಹಂದಿಗುಂದ, ಅಶೋಕ ಪಾಟೀಲ, ಶಂಕರ ಹೊಸಮನಿ, ಪರಸಪ್ಪ ಬಬಲಿ, ಚಂದ್ರು ಬೆಳಗಲಿ, ಶಿದ್ಲಿಂಗ ಕಂಬಳಿ, ಭೀಮಶಿ ಮೋಕಾಶಿ, ಕೃಣ್ಣಪ್ಪ ಬಂಡ್ರೋಳಿ, ಬಿ.ಬಿ. ಪೂಜೇರಿ, ಲಕ್ಷ್ಮಣ ತೆಳಗಡೆ, ಬಾಬುಸಾಬ ಬಳಿಗಾರ, ಸುಭಾಷ ಸೋನವಾಲಕರ, ರಮೇಶ ಉಟಗಿ, ಅಶೋಕ ನಾಯಿಕ, ಮಡ್ಡೆಪ್ಪ ತೋಳಿನವರ, ಭೀಮಗೌಡ ಪಾಟೀಲ ನಜೀರ ಶೇಖ, ಮುತ್ತೆಪ್ಪ ಖಾನಪ್ಪನವರ, ಕೆಂಚಪ್ಪ ಸಕ್ರೆಪ್ಪಗೋಳ, ಸುಭಾಷ ಬೆಳಗಲಿ, ಯಮನಪ್ಪ ಕರಬನ್ನವರ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.