ಕಾಂಗ್ರೆಸ್‌ ಬಡವರ ಪಕ್ಷ: ಡಾ. ಪಾಟೀಲ

7

ಕಾಂಗ್ರೆಸ್‌ ಬಡವರ ಪಕ್ಷ: ಡಾ. ಪಾಟೀಲ

Published:
Updated:

ಚಿಂಚೋಳಿ: ಅಧಿಕಾರ ಸಿಕ್ಕಾಗಲೆಲ್ಲಾ ಶ್ರೀಮಂತರ ಪರವಾಗಿ ಆಡಳಿತ ನಡೆಸಿದ ಬಿಜೆಪಿ ಶ್ರೀಮಂತರ ಪಕ್ಷವಾದರೆ, ಸದಾ ಬಡವರ ಪರ ನಿಂತು, ಅವರ ಏಳಿಗೆಗೆ ಶ್ರಮಿಸುತ್ತಿರುವ ಕಾಂಗ್ರೆಸ್‌ ಪಕ್ಷ ಬಡವರ ಪಕ್ಷ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.ಅವರು ತಾಲ್ಲೂಕಿನ (ಸೇಡಂ ಮತಕ್ಷೇತ್ರ ವ್ಯಾಪ್ತಿಯ)ಸುಲೇಪೇಟದಲ್ಲಿ ಸೋಮವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ’ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಳೆದ 5 ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಪಕ್ಷ ಯಾರ ಪರವಾಗಿ ಕೆಲಸ ಮಾಡಿದವು? ಹೇಗೆ ಕೆಲಸ ಮಾಡಿದವು? ಯಾರ ಅಭಿವೃದ್ಧಿ ಮಾಡಿವೆ? ಎಂಬುದು ಜನತೆಗೆ ತಿಳಿದ ಸಂಗತಿಯಾಗಿದೆ’ ಎಂದರು.‘371(ಜೆ) ಕಲಂ ಜಾರಿಗೆ ಬರಲು ಕಾರಣರಾಗಿ ಹೈಕದ ಸರ್ವಾಂಗೀಣ ಏಳ್ಗೆಗೆ ಬಹುದೊಡ್ಡ ಕೊಡುಗೆ ನೀಡಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಬೀದರ್‌ ಸಂಸದ ಧರಂಸಿಂಗ್‌ ಅವರನ್ನು ಮತ್ತೊಮ್ಮೆ ಲೋಕಸಭೆಗೆ ಕಳುಹಿಸಿ ಹೈಕದ ಜನರು ಅವರಿಂದ ಋಣಮುಕ್ತರಾಗಬೇಕು’ ಎಂದು ಅವರು ಕೋರಿಕೊಂಡರು.ಶಾಸಕ ಡಾ. ಉಮೇಶ ಜಾಧವ್‌ ಮಾತನಾಡಿ, ’ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಮಾಜದ ಎಲ್ಲಾ ವರ್ಗಗಳ ಜನರ ಹಿತರಕ್ಷಣೆ ಸಾಧ್ಯ. ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು, ಭಾರತ ಸರ್ಕಾರದ ಇಎಸ್‌ಐಸಿ ಸದಸ್ಯ ಭೀಮರಾವ್‌ ಟಿ.ಟಿ, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸುಭಾಷ್ಚಂದ್ರ ನಿಷ್ಠಿ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಜಯಶ್ರೀ ಸಜ್ಜನಶೆಟ್ಟಿ, ಸವಿತಾ ಸಜ್ಜನ, ಕವಿತಾ ಬೆಳ್ಳಿಚುಕ್ಕಿ, ಜಗದೇವ ಗುತ್ತೇದಾರ, ಉದಯಶಂಕರ ಶೆಟ್ಟಿ, ಡಾ.ಮುಜೀಬ್‌, ಶಿವಶಂಕ್ರಯ್ಯ ಕುಪನೂರು, ಸಿದ್ದಣ್ಣಗೌಡ ಪಾಟೀಲ ಯಲಕಪಳ್ಳಿ, ಅನಿಲಕುಮಾರ ಜಮಾದಾರ, ಬಸವರಾಜ ಸಜ್ಜನ್‌, ತಾಹೇರ್‌, ಮೇಘರಾಜ ರಾಠೋಡ್‌, ಚಾಂದಪಾಶಾ ಮೋಮಿನ್‌, ಯುಸುಫ್‌ ಕೋಹೀರ್‌, ಜಹೀರೊದ್ದಿನ್‌ ಪಟೇಲ್‌, ಮಹಾ ರುದ್ರಪ್ಪ ದೇಸಾಯಿ, ಬಸವರಾಜ ಬಿರಾದಾರ, ಅಮರೇಶ ಗೋಣಿ, ರುದ್ರಶೆಟ್ಟಿ ಪಡಶೆಟ್ಟಿ, ಶಂಕರರಾವ್‌ ನಾಟಿಕಾರ, ಮಾರುತಿ ಇದ್ದರು. ದಯಾನಂದ ರಮ್ಮಣಿ ಸ್ವಾಗತಿಸಿದರು. ಬಸವರಾಜ ಗಿರಿ ನಿರೂಪಿಸಿದರು. ಬಸವರಾಜ ಸಜ್ಜನಶೆಟ್ಟಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry