ಬುಧವಾರ, ಜೂನ್ 16, 2021
23 °C

ಕಾಂಗ್ರೆಸ್‌ ಸಮಾವೇಶವಾದ ಅಡಿಗಲ್ಲು ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಜಿಲ್ಲೆಯ 3.22 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸುವ ಅಂದಾಜು ರೂ.4,000 ಕೋಟಿ ಮೊತ್ತದ ವಿವಿಧ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲು ಹಾಕಿದ್ದ ವೇದಿಕೆ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಮಾವೇಶ­ವಾಗಿ ಮಾರ್ಪಾಟಾಯಿತು.ಬುಧವಾರ ಮಧ್ಯಾಹ್ನ 3.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾಮಗಾರಿಗಳಿಗೆ ಚಾಲನೆ ನೀಡಬೇಕಿತ್ತು. ಇದಕ್ಕಾಗಿ ನೀರಾವರಿ ನಿಗಮ­ದಿಂದ ವಿಶಾಲವಾದ ವೇದಿಕೆ ನಿರ್ಮಿಸ­ಲಾಗಿತ್ತು. ಬೆಳಿಗ್ಗೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಈ ಕಾರ್ಯ­ಕ್ರಮವನ್ನು ರದ್ದುಪಡಿಸ­ಲಾಯಿತು.

‘ಲೋಕಸಭೆ ಚುನಾವಣೆ ಘೋಷಣೆ­ಯಾದ ನಂತರ ರಾಜ್ಯದಲ್ಲಿ ನಾನು ನಡೆಸಿದ ಮೊದಲ ಚುನಾವಣಾ ಸಭೆ ಇದು. ವಿಜಾಪುರದಿಂದ ಪ್ರಚಾರ ಆರಂಭಿಸಿದ್ದು ಶುಭ ಲಕ್ಷಣ’ ಎಂದು ಸಿದ್ದರಾಮಯ್ಯ ಹೇಳಿದರು.ಬೆಳಗಾವಿ ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಹೆಲಿಕಾಪ್ಟರ್‌ನಲ್ಲಿ ಬರಬೇಕಿದ್ದ ಮುಖ್ಯಮಂತ್ರಿಗಳು, ಬೆಳಗಾವಿಯಿಂದ ಸಂಜೆ 4ಕ್ಕೆ ವಿಜಾಪುರಕ್ಕೆ ರಸ್ತೆ ಮಾರ್ಗವಾಗಿ ಬಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.