ಬುಧವಾರ, ನವೆಂಬರ್ 20, 2019
20 °C

`ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಗೊಂದಲ ಇಲ್ಲ'

Published:
Updated:

ಹೊನ್ನಾಳಿ: ಹೊನ್ನಾಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದು ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು. ಇಲ್ಲಿಗೆ ಸಮೀಪದ ಗೊಲ್ಲರಹಳ್ಳಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲುವಿಗೆ ನಾನು ಶ್ರಮಿಸುವುದಾಗಿ ಹಾಗೂ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಬಿ. ಸಿದ್ದಪ್ಪ ಈ ಹಿಂದೆ ಹೇಳಿದ್ದೆವು. ಈಗಲೂ  ಆ ಹೇಳಿಕೆಗೆ ಬದ್ಧರಾಗಿದ್ದೇವೆ. ಪಕ್ಷದ ಕಾರ್ಯಕರ್ತರೆಲ್ಲರೂ ಹಗಲಿರುಳೂ ಶ್ರಮಿಸಿ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಅವರನ್ನು ಗೆಲ್ಲಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿರು. ಕಾಂಗ್ರೆಸ್ ಮುಖಂಡ ಬಿ. ಸಿದ್ದಪ್ಪ ಮಾತನಾಡಿ, ಸಭೆ-ಸಮಾರಂಭಗಳಲ್ಲಿ ನಾವು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರುತ್ತೇವೆ. ಆದರೆ, ಚುನಾವಣೆಯಲ್ಲಿ ಮಾತ್ರ ಸೋಲುತ್ತೇವೆ ಏಕೆ? ಇದು ಯಕ್ಷಪ್ರಶ್ನೆ ಆಗಬಾರದು. ಈ ಬಾರಿ ಇದಕ್ಕೆ ಕ್ಷೇತ್ರದ ಜನತೆ ಸಮರ್ಪಕ ಉತ್ತರ ನೀಡಬೇಕು ಎಂದರು.ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಡಿ.ಜಿ. ವಿಶ್ವನಾಥ್ ದೊಡ್ಡೇರಿ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಎಂ. ಸಿದ್ದಪ್ಪ, ಎಚ್.ಎ. ಉಮಾಪತಿ, ಡಾ.ಎಲ್. ಈಶ್ವರ ನಾಯ್ಕ, ಕಾಂತರಾಜ್, ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಆರ್. ಚಂದ್ರಶೇಖರಪ್ಪ, ಜಿ. ಶಿವರಾಮ ನಾಯ್ಕ, ಚನ್ನವೀರಪ್ಪ, ಜೀವೇಶಪ್ಪ, ವಾಗೀಶ್,  ಸುಲೇಮಾನ್ ಖಾನ್,  ಮಾದಪ್ಪ ಇದ್ದರು.ರಮೇಶ್ ಸ್ವಾಗತಿಸಿದರು. ಪ್ರೇಮ್‌ಕುಮಾರ್ ಭಂಡಿಗಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಭು ವಂದಿಸಿದರು.

ಪ್ರತಿಕ್ರಿಯಿಸಿ (+)