ಸೋಮವಾರ, ಏಪ್ರಿಲ್ 19, 2021
32 °C

ಕಾಂಗ್ರೆಸ್ ಏಕಾಂಗಿ ಸ್ಪರ್ಧೆ: ಮುನಿಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಗುಡಿ ಕೈಗಾರಿಕೆ ಆಭಿವೃದ್ಧಿಗೆ ರೂ 11 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದು, ಮುಂದಿನ ಯೋಜನೆಗೆ ರೂ 24 ಸಾವಿರ ಕೋಟಿಯನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಸಣ್ಣ ಕೈಗಾರಿಕೆಗಳ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿ ಕೈಗಾರಿಕೆಗಳನ್ನು ಗುರುತಿಸಿ ಆಭಿವೃದ್ಧಿಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಡನೆ ಒಂದು ತಿಂಗಳೊಳಗೆ ಚರ್ಚಿಸಲಾಗುವುದು ಎಂದು ನುಡಿದರು.ಗುಡಿ ಕೈಗಾರಿಕೆಗಳ ಅಭಿವೃದ್ಧಿ ಮೂಲಕ ಎರಡೂ ಜಿಲ್ಲೆಗಳ ಉದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವ ಯತ್ನ ಶುರುವಾಗಲಿದೆ. ಜೊತೆಗೆ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮವನ್ನೂ (ಪಿಎಂಇಜಿಪಿ- ಪ್ರೈಂ ಮಿನಿಸ್ಟರ್ ಎಂಪ್ಲಾಯಮೆಂಟ್ ಜನರೇಷನ್ ಪ್ರೋಗ್ರಾಂ) ಪರಿಪೂರ್ಣವಾಗಿ ಅನುಷ್ಠಾನಗೊಳಿಸಲಾಗುವುದು. ಸ್ವಂತ ಉದ್ಯೋಗ ನಡೆಸಲು 5 ಲಕ್ಷದಿಂದ 25 ಲಕ್ಷದವರೆಗೂ ಸಾಲ ನೀಡಲಾಗುವುದು. ಕೌಶಲ್ಯವಿಲ್ಲದವರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗುವುದು ಎಂದರು.ಆಗರಬತ್ತಿ, ಮೇಣದಬತ್ತಿ, ಚರ್ಮದ ಉತ್ಪನ್ನಗಳ ತಯಾರಿಕೆ, ಖಾದಿ, ಉಣ್ಣೆ ಉತ್ಪನ್ನಗಳ ತಯಾರಿಕೆ, ಟೊಮೆಟೋ ಉತ್ಪನ್ನಗಳ ರಫ್ತು, ರೇಷ್ಮೆ ಕೃಷಿ ಸೇರಿದಂತೆ ಹಲವು ವೃತ್ತಿಪರ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಶೇ 95 ಮಂದಿಗೆ ಉದ್ಯೋಗ ದೊರಕುವುದು ಖಚಿತ ಎಂದು ನುಡಿದರು.ಗುಡಿ ಕೈಗಾರಿಕೆಗಳ ಮೂಲ ಉತ್ಪಾದಿಸಲಾದ ವಸ್ತುಗಳನ್ನು ಖರೀದಿಸಿ ದೇಶದಲ್ಲಿ 7 ಸಾವಿರ ಮಳಿಗೆಗಳಿವೆ.

ಐಎಸ್‌ಐ ಪ್ರಮಾಣಪತ್ರವನ್ನೂ ದೊರಕಿಸಲಾಗುವುದು. 358 ವಸ್ತುಗಳನ್ನು ಖರೀದಿಸುವ ಅವಕಾಶವೂ ಇರುವುದರಿಂದ ಗುಡಿ ಕೈಗಾರಿಕೆಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸಮಸ್ಯೆ ಇಲ್ಲ ಎಂದು ಹೇಳಿದರು.ಸಚಿವರ ಜೊತೆಯಲ್ಲಿದ್ದ ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿಯ ನಂದಿ ಗ್ರಾಮೋದ್ಯೋಗ ಸಂಘದ ನಾಗರಾಜ ಗಾಂಧಿ ಮಾತನಾಡಿ, ಖಾದಿಯಿಂದ ದಾರ ತೆಗೆಯುವ ಕೆಲಸ ಮಾಡುವ ಮಹಿಳೆಯರಿಗೆ 350 ಚರಕಗಳನ್ನು ಒದಗಿಸಲಾಗಿದೆ. ಆವರು  ಮನೆಯಲ್ಲೇ ಕೆಲಸ ಮಾಡಿ ಪ್ರತಿ ತಿಂಗಳು ರೂ 3 ಸಾವಿರ ರೂಪಾಯಿ ಸಂಪಾದಿಸುತ್ತಾರೆ. ಇಂಥ ಹಲವು ಗುಡಿ ಕೈಗಾರಿಕೆಗಳಿಗೆ ಸರ್ಕಾರ ನೀಡುವ ಪ್ರೋತ್ಸಾಹವನ್ನು ಬಳಸಿಕೊಳ್ಳಬೇಕು ಎಂದರು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೌಡೇಶ್ವರಿ, ಜಮಖಂಡಿ, ಕಾಮ್ಳೆ,  ಖಾದಿ ಗ್ರಾಮೋದ್ಯೋಗ ಮಂಡಳಿಯ ದಕ್ಷಿಣ ಭಾರತ ವ್ಯಾಪ್ತಿಯ ಸಲಹೆಗಾರ ಕಾಳಪ್ಪ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.