ಗುರುವಾರ , ನವೆಂಬರ್ 14, 2019
19 °C

ಕಾಂಗ್ರೆಸ್ ಕಲಿ ಗೀತಾ ಬಳಿ `ಕೋಟಿ ಚಿನ್ನ'

Published:
Updated:

ತುರುವೇಕೆರೆ: ಬುಧವಾರ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ನ ಗೀತಾ ರಾಜಣ್ಣ, ಬಿಜೆಪಿಯ ಬಿ.ಕೆ.ಸೋಮಶೇಖರ್ ಇಬ್ಬರೂ ಕೋಟ್ಯಧಿಪತಿಗಳೇ! ಗೀತಾ 5.3 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದರೆ, ಸೋಮಶೇಖರ್ ರೂ. 2.92 ಕೋಟಿ ಆಸ್ತಿ ಘೋಷಿಸಿದ್ದಾರೆ.ಕಾಂಗ್ರೆಸ್‌ನ ಗೀತಾ ರೂ. 85.21 ಲಕ್ಷ ಮೌಲ್ಯದ 2.8 ಕೆ.ಜಿ ಚಿನ್ನ ಹೊಂದಿದ್ದಾರೆ. ಪತಿ ರಾಜಣ್ಣ ಬಳಿ ರೂ. 24.66 ಲಕ್ಷ ಬೆಲೆ ಬಾಳುವ ಚಿನ್ನ ಇದೆ. ಒಟ್ಟಾರೆ ಕುಟುಂಬ ರೂ. 1.20 ಕೋಟಿ ಮೌಲ್ಯದ ಚಿನ್ನಾಭರಣ ಹೊಂದಿದೆ.ಕುಟಂಬ 7.9 ಲಕ್ಷ ನಗದು ಹೊಂದಿದೆ. ರೂ. 1.86 ಲಕ್ಷ ಠೇವಣಿ ಹಾಗೂ ಇತರೆ ಹೂಡಿಕೆ ಹೊಂದಿದ್ದಾರೆ. ಸುಮಾರು 5 ಲಕ್ಷ ಮೊತ್ತದ ಎಲ್‌ಐಸಿ ಪಾಲಿಸಿ ಇದೆ. ಗೋಕುಲಮ್ ಸಂಸ್ಥೆಗೆ ರೂ. 23.75 ಲಕ್ಷ ಸಾಲ ನೀಡಿದ್ದಾರೆ. ಕಾವೇರಿ ಬಾರ್‌ನಲ್ಲಿ ರೂ. 11.52 ಲಕ್ಷ ತೊಡಗಿಸಿದ್ದಾರೆ. ಗೀತಾ ರೂ. 10.58 ಲಕ್ಷ ಮೌಲ್ಯದ ಇನೋವಾ ಕಾರು, ಪತಿ ರಾಜಣ್ಣ 2.58 ಲಕ್ಷದ ಮಾರುತಿ ಕಾರು ಹೊಂದಿದ್ದಾರೆ.ಮತ್ತಿಕೆರೆ, ಅಂಕಳಕೊಪ್ಪ ಗ್ರಾಮಗಳಲ್ಲಿ ದಂಪತಿ 35 ಲಕ್ಷ ಬೆಲೆ ಬಾಳುವ 12 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಬೆಂಗಳೂರು ಶ್ರೀಗಂಧ ಕಾವಲ್ ಹಾಗೂ ವಿಘ್ನೇಶ್ವರ ನಗರದಲ್ಲಿ 25 ಲಕ್ಷ ಬೆಲೆ ಬಾಳುವ ನಿವೇಶನ, ನೆಲಗದರನಹಳ್ಳಿಯಲ್ಲಿ ಗೀತಾ ಹೆಸರಿನಲ್ಲಿ 50 ಲಕ್ಷ ಮೌಲ್ಯದ ನಿವೇಶನ, ಬ್ಯಾಡರಹಳ್ಳಿ ಕೆಂಪೇಗೌಡ ಲೇ-ಔಟ್‌ನಲ್ಲಿ 15 ಲಕ್ಷ ಬೆಲೆ ಬಾಳುವ 2400 ಚದರಡಿ ನಿವೇಶನ ಹೊಂದಿದ್ದಾರೆ. ಕವಿಕಾ ಬಡಾವಣೆಯಲ್ಲಿ ಗೀತಾ ಹೆಸರಿನಲ್ಲಿ 1.6 ಕೋಟಿ, ಪತಿ ರಾಜಣ್ಣ ಹೆಸರಿನಲ್ಲಿ ರೂ. 1.25 ಕೋಟಿ ಬೆಲೆ ಬಾಳುವ ವಾಸದ ಮನೆಗಳಿವೆ. ಗೀತಾಗೆ ರೂ. 9.1 ಲಕ್ಷ ಸಾಲ ಇದೆ.ಬಿ.ಕೆ.ಸೋಮಶೇಖರ್ (ಬಿಜೆಪಿ)

ಬಿಜೆಪಿಯ ಬಿ.ಕೆ.ಸೋಮಶೇಖರ್ 45 ಸಾವಿರ ನಗದು ಹೊಂದಿದ್ದಾರೆ. 58 ಸಾವಿರ ಠೇವಣಿ ಇದೆ. ಕುಟುಂಬದ ಹೆಸರಿನಲ್ಲಿ 16 ಲಕ್ಷ ಉಳಿತಾಯ ಪತ್ರವಿದೆ. ರೂ. 8.5 ಲಕ್ಷ ಸಾಲ ನೀಡಿದ್ದಾರೆ (ಯಾರಿಗೆ ಎಂದು ನಮೂದಿಸಿಲ್ಲ) ರೂ. 15.53 ಲಕ್ಷ ಬೆಲೆಬಾಳುವ ವಾಹನ ಹೊಂದಿದ್ದಾರೆ (ಯಾವುದು ನಮೂದಿಸಿಲ್ಲ). ರೂ. 4.89 ಲಕ್ಷ ಬೆಲೆಬಾಳುವ 350 ಗ್ರಾಂ ಚಿನ್ನ ಹೊಂದಿದ್ದಾರೆ.ಬ್ಯಾಲಹಳ್ಳಿ ಹಾಗೂ ಮನಗೊಂಡನಹಳ್ಳಿಯಲ್ಲಿ ಸೋಮಶೇಖರ್ ತಮ್ಮ ಹೆಸರಿನಲ್ಲಿ ರೂ. 95.69 ಲಕ್ಷ, ಹಾಗೂ ಪತ್ನಿ ಹೆಸರಲ್ಲಿ ರೂ. 15.83 ಲಕ್ಷ ಬೆಲೆ ಬಾಳುವ 15.34 ಎಕರೆ ಕೃಷಿಭೂಮಿ ಹೊಂದಿದ್ದಾರೆ. ಕೊಡಗೀಹಳ್ಳಿಯಲ್ಲಿ 3600 ಚದರಡಿ ವಿಸ್ತೀರ್ಣದ ರೂ. 1.5 ಕೋಟಿ ಬೆಲೆ ಬಾಳುವ ವಾಣಿಜ್ಯ ಕಟ್ಟಡ ಮತ್ತು 16.38 ಲಕ್ಷ ಬೆಲೆ ಬಾಳುವ ವಾಸದ ಮನೆ ಹೊಂದಿದ್ದಾರೆ.ಸೋಮಶೇಖರ್‌ಗೆ 24.36 ಲಕ್ಷ ಬ್ಯಾಂಕ್ ಸಾಲ ಇದೆ. ತುರುವೇಕೆರೆ ಠಾಣೆಯಲ್ಲಿ ಮೂರು ಮೊಕದ್ದಮೆ ದಾಖಲಾಗಿವೆ. ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯ 12.11.2010 ಹಾಗೂ 18.3.2013ರಲ್ಲಿ ಆರೋಪ ಹೊರಿಸಿದೆ.

ಪ್ರತಿಕ್ರಿಯಿಸಿ (+)