ಬುಧವಾರ, ಜೂನ್ 16, 2021
23 °C

ಕಾಂಗ್ರೆಸ್ ಕಾರ್ಯಕರ್ತರಿಂದ ಶ್ರಮದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ರಸ್ತೆ, ಚರಂಡಿ, ನೀರು ಸೇರಿದಂತೆ ಮೂಲ ಸೌಕರ್ಯದ ಕೊರತೆ ಎದುರಿಸುತ್ತಿರುವ ರಾಜೀವ್ ಗಾಂಧೀಪುರ ಕಾಲೊನಿಯಲ್ಲಿ ರಾಮನಗರ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಸೋಮವಾರ ಪರಿಸರ ಸ್ವಚ್ಛತೆ, ರಸ್ತೆ ನಿರ್ಮಾಣ ಕಾರ್ಯ ಕೈಗೊಂಡರು.ಯುವ ಕಾಂಗ್ರೆಸ್ ಸಮಿತಿ ಕೈಗೊಳ್ಳುವ ಶ್ರಮದಾನ ಕಾರ್ಯಕ್ರಮದಡಿ ಈ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾರ್ಯ ಕೈಗೊಂಡಿರುವುದಾಗಿ ಯುವ ಕಾಂಗ್ರೆಸ್ ಮುಖಂಡರಾದ ರಾಜು, ಶಿವಣ್ಣ, ಅನಿಲ್ ತಿಳಿಸಿದರು.ಗ್ರಾಮದಲ್ಲಿ 400ಕ್ಕೂ ಹೆಚ್ಚು ಮನೆಗಳಿದ್ದರೂ ಪ್ರಮುಖವಾಗಿ ರಸ್ತೆಗಳು ಇಲ್ಲವಾಗಿವೆ.ಆದ್ದರಿಂದ ಜೆಸಿಬಿ ಯಂತ್ರದ ನೆರವಿನಿಂದ ರಸ್ತೆ ಸಮ ಮಾಡಲಾಗುತ್ತಿದೆ ಎಂದು ವಿವರಿಸಿದರು.ಜಿಲ್ಲಾ ಕೇಂದ್ರದಿಂದ ಕೇವಲ 4 ಕಿ.ಮೀ ದೂರದಲ್ಲಿರುವ ರಾಜೀವ್ ಗಾಂಧೀಪುರದಲ್ಲಿ ಮೂಲ ಸೌಕರ್ಯದ ಸಮಸ್ಯೆ ತೀವ್ರವಾಗಿದೆ. ಇಲ್ಲಿಯೇ ಹೀಗಾದರೆ ಇನ್ನೂ ದೂರದಲ್ಲಿ ಇರುವ ಗ್ರಾಮಗಳ ಸ್ಥಿತಿ ನೆನೆಸಿಕೊಳ್ಳಲಾಗದು ಎಂದು  ಹೇಳಿದರು. ಯುವ ಕಾಂಗ್ರೆಸ್ ಮುಖಂಡರಾದ ಸ್ವಾಮಿ, ಮುತ್ತುರಾಜ್, ಸುರೇಶ್ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.