ಶನಿವಾರ, ನವೆಂಬರ್ 23, 2019
17 °C

ಕಾಂಗ್ರೆಸ್ ಚುನಾವಣಾ ಪ್ರಚಾರ

Published:
Updated:

ನೆಲಮಂಗಲ: `ಹಣದ ಮದದಿಂದ ಶಾಸಕರ ಮಾರುಕಟ್ಟೆ ಬೆಲೆಯನ್ನು ಹೆಚ್ಚಿಸಿದ ಅಪಕೀರ್ತಿ ಬಿಜೆಪಿಯದ್ದು. ಸಚಿವರ ಮನೆಗಳಲ್ಲಿ ನೋಟು ಎಣಿಸುವ ಯಂತ್ರಗಳು ಸಿಗುತ್ತಿರುವುದು ಇದಕ್ಕೆ ಸಾಕ್ಷಿ' ಎಂದು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಕಿಡಿಕಾರಿದರು.ಬಸವಣ್ಣ ದೇವರ ಮಠದ ಆವರಣದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.`ಅಪ್ಪ ಮಕ್ಕಳ ಪಕ್ಷ ಜೆಡಿಎಸ್‌ಗೆ ಜನರ ಬಗ್ಗೆ ಕಳಕಳಿ ಇಲ್ಲ. ಮಾಜಿ ಪ್ರಧಾನಿ ದೇವೇಗೌಡ, ರಾಜ್ಯದ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿ ಒಡೆದ ಮನೆಯಾಗಿದೆ' ಎಂದರು. ಂಗ್ರೆಸ್ ಮುಖಂಡರಾದ ನೆ.ಲ.ನರೇಂದ್ರಬಾಬು, ನೆ.ಲ.ಗಿರಿಧರ್, ಸಚ್ಚಿದಾನಂದ ಮೂರ್ತಿ , ವೆಂಕಟೇಶ್ ಬಾಬು, ಮುನಿರಾಮಯ್ಯ, ವಕೀಲ ವೆಂಕಟ್‌ರಾಮು, ಮಾಜಿ ಸಚಿವ ಶಂಕರ್ ನಾಯಕ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)