ಕಾಂಗ್ರೆಸ್ ಜತೆ ಪಿಆರ್‌ಪಿ ವಿಲೀನ: ಚಿರಂಜೀವಿ

7

ಕಾಂಗ್ರೆಸ್ ಜತೆ ಪಿಆರ್‌ಪಿ ವಿಲೀನ: ಚಿರಂಜೀವಿ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್):  ಪ್ರಜಾ ರಾಜ್ಯಂ ಪಕ್ಷ (ಪಿಆರ್‌ಪಿ) ಕಾಂಗ್ರೆಸ್‌ನೊಂದಿಗೆ ವಿಲೀನ ಆಗಲಿದೆ ಎಂದು ತೆಲುಗು ಚಲನಚಿತ್ರರಂಗದ ಖ್ಯಾತ ನಟ ಕೆ. ಚಿರಂಜೀವಿ ಭಾನುವಾರ ಇಲ್ಲಿ ಪ್ರಕಟಿಸಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರೊಂದಿಗಿನ 50 ನಿಮಿಷಗಳ ಭೇಟಿ ನಂತರ ಚಿರಂಜೀವಿ ಮಾತನಾಡಿ, ಕಾಂಗ್ರೆಸ್ ಮತ್ತು ಪಿಆರ್‌ಪಿ ಎರಡೂ ಸಾಮಾಜಿಕ ನ್ಯಾಯಕ್ಕೆ ಹೋರಾಡುತ್ತಿದ್ದು ಆಂಧ್ರಪ್ರದೇಶದ ಜನರ ‘ಹಿತಾಸಕ್ತಿ’ಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.

‘ಯಾವುದೇ ಕರಾರಿಲ್ಲದೆ ಈ ತೀರ್ಮಾನಕ್ಕೆ ಬರಲಾಗಿದೆ. ವಿಲೀನಕ್ಕೆ ತಮ್ಮ ಪಕ್ಷದೊಳಗೆ ಯಾವುದೇ ವಿರೋಧ ಇಲ್ಲ’ ಎಂದು ಅವರು ಸೋನಿಯಾಗಾಂಧಿ ಅವರ ನಿವಾಸದ ಹೊರಗಡೆ ಸುದ್ದಿಗಾರರಿಗೆ ತಿಳಿಸಿದರು.

‘ನಾನು ಏನನ್ನೂ ಬಯಸುವುದಿಲ್ಲ. ಖಾತೆ ಹಂಚಿಕೆ ಕಾಂಗ್ರೆಸ್ ಕರ್ತವ್ಯ’ ಎಂದು ಚಿರಂಜೀವಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry