ಬುಧವಾರ, ನವೆಂಬರ್ 20, 2019
20 °C

ಕಾಂಗ್ರೆಸ್ ನಡಿಗೆ: ಕಾಗೋಡು ತಿಮ್ಮಪ್ಪ ಅಧ್ಯಕ್ಷ

Published:
Updated:

ಬೆಂಗಳೂರು: ಕೆಪಿಸಿಸಿ ಹಮ್ಮಿಕೊಂಡಿರುವ `ಕಾಂಗ್ರೆಸ್ ನಡಿಗೆ-ಜನರ ಬಳಿಗೆ~ ಕಾರ್ಯಕ್ರಮದ ಉಸ್ತುವಾರಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಸಂಯೋಜನಾ ಸಮಿತಿ ರಚಿಸಲಾಗಿದೆ. 15 ಸದಸ್ಯರ ಈ ಸಮಿತಿ ರಾಜ್ಯವ್ಯಾಪಿ ನಡೆಯುವ ಕಾರ್ಯಕ್ರಮದ ಉಸ್ತುವಾರಿ ವಹಿಸಲಿದೆ.ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ವಿ.ಆರ್.ಸುದರ್ಶನ್, ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಬಿ.ಎ.ಮೊಯಿದ್ದೀನ್, ಶಾಸಕರಾದ ಬಿ.ಸಿ.ಪಾಟೀಲ್, ದಿನೇಶ್ ಗುಂಡೂರಾವ್, ಮಾಜಿ ಶಾಸಕರಾದ ಎಸ್.ಜಿ.ನಂಜಯ್ಯನಮಠ, ಮಹಿಮಾ ಪಟೇಲ್, ಎಚ್.ಆಂಜನೇಯ, ಕೆಪಿಸಿಸಿ ಸದಸ್ಯ ಡಾ.ಲೋಹಿತ್ ನಾಯ್ಕರ್, ವೀಣಾ ಅಚ್ಚಯ್ಯ, ಶೋಭಾ ನಾಯಕ್, ಪುಷ್ಪವಲ್ಲಿ ಅವರನ್ನು ಸಮಿತಿಯ ಸದಸ್ಯರಾಗಿ ಹಾಗೂ ಕೆಪಿಸಿಸಿ ಸದಸ್ಯ ಸಿ.ಆರ್.ನಾರಾಯಣಪ್ಪ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.

 

`ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಮಂಗಳವಾರ ಸಮಿತಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಜೂನ್ 15ರಿಂದ ಆಗಸ್ಟ್ 14ರವರೆಗೆ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ `ಕಾಂಗ್ರೆಸ್ ನಡಿಗೆ-ಜನರ ಬಳಿಗೆ~ ಆಂದೋಲನ ನಡೆಯಲಿದೆ~ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)