ಶುಕ್ರವಾರ, ನವೆಂಬರ್ 22, 2019
22 °C

ಕಾಂಗ್ರೆಸ್ ಬಂದರೆ `ಭಾಗ್ಯಜ್ಯೋತಿಗೆ' ಬಲ

Published:
Updated:

ಬಸವಕಲ್ಯಾಣ (ಬೀದರ್): `ಕಾಂಗ್ರೆಸ್ ಅಧಿಕಾರಕ್ಕೆ ಮರಳಿದರೆ `ಭಾಗ್ಯಜ್ಯೋತಿ' ಫಲಾನುಭವಿಗಳು ಉಳಿಸಿಕೊಂಡಿರುವ ಎಲ್ಲ ಬಾಕಿ ಮನ್ನಾ ಮಾಡಲಿದ್ದು, ಮತ್ತೆ ಈ ಯೋಜನೆಯನ್ನು ಕಾರ್ಯಗತಗೊಳಿಸಿ, ಬಡವರಿಗೆ ಅನುಕೂಲ ಮಾಡಿಕೊಡಲಾಗುವುದು'  ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ಅಲ್ಲದೆ, `ಸರ್ಕಾರ ರಚನೆಯಾದರೆ ಗ್ರಾಮೀಣ ಪ್ರದೇಶದಲ್ಲಿ ದಿನದ 12 ಗಂಟೆ ಕಾಲ ತ್ರಿಫೇಸ್‌ನಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸಲು ತೀರ್ಮಾನಿಸಲಾಗಿದೆ. ಮತದಾರರಿಗೆ ಪಕ್ಷದ ವಾಗ್ದಾನಗಳನ್ನು ಒಳಗೊಂಡ ಪ್ರಣಾಳಿಕೆ ಎರಡು ದಿನಗಳಲ್ಲಿ ಬಿಡುಗಡೆಯಾಗಲಿದೆ' ಎಂದು ಸೋಮವಾರ ಹೇಳಿದರು. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ನಾರಾಯಣರಾವ್ ಸೇರಿದಂತೆ ಜಿಲ್ಲೆಯಲ್ಲಿ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು,  `ಕಾಂಗ್ರೆಸ್‌ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವುದು ನೂರರಷ್ಟು ಖಚಿತ' ಎಂದರು.

ಪ್ರತಿಕ್ರಿಯಿಸಿ (+)