ಭಾನುವಾರ, ಏಪ್ರಿಲ್ 11, 2021
30 °C

ಕಾಂಗ್ರೆಸ್, ಬಿಜೆಪಿಗೆ ದೇಣಿಗೆ ಪ್ರವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್, ಬಿಜೆಪಿಗೆ ದೇಣಿಗೆ ಪ್ರವಾಹ

ಬೆಂಗಳೂರು: ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದೇಣಿಗೆ, ಕೂಪನ್‌ಗಳ ಮಾರಾಟ ಮತ್ತಿತರ ಮೂಲಗಳಿಂದ ರೂ 2,266 ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಿವೆ. ಇದರಲ್ಲಿ ರಾಜ್ಯದ ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ರೂ 1,492.35 ಕೋಟಿಯಷ್ಟು ಹಣವನ್ನು ಕ್ರೋಡೀಕರಿಸಿದೆ.ಆಡಳಿತ ಪಕ್ಷ ಬಿಜೆಪಿ ರೂ 769.81 ಕೋಟಿ ಹಾಗೂ ಜೆಡಿಎಸ್ ರೂ 4.63 ಕೋಟಿ ಸಂಗ್ರಹಿಸಿವೆ.

`ಪ್ರಜಾಪ್ರಭುತ್ವದಲ್ಲಿ ಸುಧಾರಣೆ ತರಲು ಸಂಘಟನೆ~ ಯ (ಎಡಿಆರ್) ರಾಷ್ಟ್ರೀಯ ಚುನಾವಣಾ ಕಾವಲು (ಎನ್‌ಇಡಬ್ಲ್ಯೂ) ಸಮಿತಿಯು ಮಾಹಿತಿ ಹಕ್ಕು ಕಾಯ್ದೆ ಮೂಲಕ ಆದಾಯ ತೆರಿಗೆ ಇಲಾಖೆಯಿಂದ ಪಡೆದ ದಾಖಲಾತಿಗಳಲ್ಲಿ ಈ ವಿವರಗಳು ಬೆಳಕಿಗೆ ಬಂದಿವೆ.ಕೂಪನ್‌ಗಳ ಮಾರಾಟದಿಂದ ಕಾಂಗ್ರೆಸ್, ಅಧಿಕ ಮೊತ್ತ ಅಂದರೆ ರೂ 1,171.61 ಕೋಟಿ ಸಂಗ್ರಹಿಸಿದೆ. ದೇಣಿಗೆಗಳಿಂದ ಬಿಜೆಪಿ ರೂ 644.77 ಕೋಟಿ, ಕಾಂಗ್ರೆಸ್ ರೂ 183.82  ಕೋಟಿ, ಜೆಡಿಎಸ್ ರೂ 4.5 ಕೋಟಿ ಸಂಗ್ರಹಿಸಿವೆ. ಬಡ್ಡಿಯಿಂದ ಕಾಂಗ್ರೆಸ್ ರೂ 82.15 ಕೋಟಿ, ಬಿಜೆಪಿ ರೂ 53.41 ಕೋಟಿ, ಜೆಡಿಎಸ್ 94 ಸಾವಿರ ರೂಪಾಯಿ ಆದಾಯ ಗಳಿಸಿವೆ. ಆಜೀವನ್ ಸಹಯೋಗ್ ನಿಧಿ ಮೂಲಕ ಬಿಜೆಪಿ ರೂ 50.34 ಕೋಟಿ ಕ್ರೋಡೀಕರಿಸಿದೆ.ವೆಚ್ಚದಲ್ಲೂ ಕಾಂಗ್ರೆಸ್ ಮುಂದೆ:
ಕಾಂಗ್ರೆಸ್, ವಿವಿಧ ಚುನಾವಣೆಗಳಿಗಾಗಿ ರೂ 716.03 ಕೋಟಿ, ನೆರವು ನೀಡಿಕೆಗಾಗಿ ರೂ 131.18 ಕೋಟಿ, ಪ್ರಚಾರಕ್ಕಾಗಿ ರೂ 87.42 ಕೋಟಿ ಖರ್ಚು ಮಾಡಿದೆ. ಬಿಜೆಪಿಯು ಜಾಹೀರಾತು ಮತ್ತು ಪ್ರಚಾರಕ್ಕಾಗಿ ರೂ 271 ಕೋಟಿ, ಪ್ರವಾಸಕ್ಕಾಗಿ ರೂ 141.15 ಕೋಟಿ, ಸಭೆಗಳಿಗಾಗಿ ರೂ 77.97 ಕೋಟಿ ವೆಚ್ಚ ಮಾಡಿದೆ. ಜೆಡಿಎಸ್, ವೆಚ್ಚದ ವಿವರವನ್ನು ಸಲ್ಲಿಸಿಲ್ಲ.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಎಲ್ಲ ವಿವರ ನೀಡಿದ `ಎಡಿಆರ್~ ಸದಸ್ಯ ಸಂಚಾಲಕ ಪ್ರೊ.ತ್ರಿಲೋಚನ ಶಾಸ್ತ್ರಿ, `ಕರ್ನಾಟಕದಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳೂ ದೇಣಿಗೆ ಮೂಲಕ ಅಪಾರ ಹಣ ಸಂಗ್ರಹಿಸಿವೆ. ಬೃಹತ್ ಕಟ್ಟಡ ನಿರ್ಮಾಣ ಕಂಪೆನಿಗಳಿಂದ ಹಣದ ರೂಪದಲ್ಲಿ ಮತ್ತು ಕೆಲವು ಕಂಪೆನಿಗಳಿಂದ ಷೇರುಗಳ ರೂಪದಲ್ಲೂ ದೇಣಿಗೆ ಪಡೆದಿವೆ. ತೆರಿಗೆ ಸಲ್ಲಿಕೆಯಾಗದ ಹಣ ಸಂಗ್ರಹವೂ ಭಾರೀ ಪ್ರಮಾಣದಲ್ಲಿರುವ ಶಂಕೆ ಇದೆ. ಆದರೆ, ಈ ಬಗ್ಗೆ ಆಧಾರಗಳಿಲ್ಲ~ ಎಂದು ಹೇಳಿದರು.`ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ರಾಜಕೀಯ ಪಕ್ಷಗಳು ಮತದಾರರಿಗೆ ಜವಾವ್ದಾರಿಯುತವಾಗಿಲ್ಲ. ಕೋಟ್ಯಂತರ ರೂಪಾಯಿಗಳ ಹಗರಣಗಳಲ್ಲಿ ಎಲ್ಲ ಪಕ್ಷಗಳೂ ಮುಳುಗಿವೆ. ಹೀಗಿರುವಾಗ ಸರ್ಕಾರಿ ಅಧಿಕಾರಿಗಳಿಂದ ಭ್ರಷ್ಟಾಚಾರ ಹೆಚ್ಚಾಗುವುದು ಸಾಮಾನ್ಯ~ ಎಂದು ಅವರು ವಿಷಾದಿಸಿದರು.`ರಾಜಕೀಯ ಪಕ್ಷಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಆದರೆ ಆ ವಿನಾಯಿತಿಯನ್ನು ಪಡೆದುಕೊಳ್ಳಬೇಕಾದರೆ ನಿಯಮಿತವಾಗಿ ಲೆಕ್ಕ ಪರಿಶೋಧನೆ ಮಾಡಿಸಬೇಕು. ಜತೆಗೆ ಐಟಿ ರಿಟರ್ನ್ ಸಲ್ಲಿಸಬೇಕು. ಆದಾಯ ತೆರಿಗೆ ಕಾಯ್ದೆ ಕಲಂ 13ಎ ಪ್ರಕಾರ ರಾಜಕೀಯ ಪಕ್ಷಗಳ ಆರ್ಥಿಕ ಕಾರ್ಯನಿರ್ವಹಣೆಯು ಪಾರದರ್ಶಕವಾಗಿರಬೇಕು~ ಎಂದು  ಅಭಿಪ್ರಾಯಪಟ್ಟರು.`2007- 08, 08- 09, 09- 10, 10- 11ರ ಸಾಲಿನಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ಐಟಿ ರಿಟರ್ನ್‌ಗಳಲ್ಲಿ ಈ ವಿವರಗಳು ಇವೆ. ಜೆಡಿಎಸ್ 2007- 08 ಮತ್ತು 2010- 11ರ ಸಾಲಿನಲ್ಲಿ ರಿಟರ್ನ್ ಸಲ್ಲಿಸಿಲ್ಲ. ಕೆಲವು ಪ್ರಾದೇಶಿಕ ರಾಜಕೀಯ ಪಕ್ಷಗಳು ನಿಯಮಿತವಾಗಿ ಐಟಿ ರಿಟರ್ನ್ ಸಲ್ಲಿಸುತ್ತಿಲ್ಲ. ಈ ವಿಚಾರದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ~ ಎಂದು ಅವರು ಆರೋಪಿಸಿದರು.`ರಾಜಕೀಯ ಪಕ್ಷಗಳ ಕಾರ್ಯನಿರ್ವಹಣೆಯಲ್ಲಿ ಆರ್ಥಿಕ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತರಿಪಡಿಸಲು ಪಕ್ಷಗಳ ಆರ್ಥಿಕ ವರದಿಗಳು ಸಮಗ್ರವಾಗಿರುವಂತೆ ಕೇಂದ್ರ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು~ ಎಂದು ಅವರು ಮನವಿ ಮಾಡಿದರು.ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.