ಗುರುವಾರ , ಜೂನ್ 24, 2021
24 °C

ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯಸಭೆಗೆ ಸ್ಪರ್ಧಿಸಲಿರುವ ತಮ್ಮ ಪಕ್ಷಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿವೆ.ಆಂಧ್ರಪ್ರದೇಶದಿಂದ ತೆಲುಗು ಸೂಪರ್‌ಸ್ಟಾರ್ ಚಿರಂಜೀವಿ ಮತ್ತು ಪಕ್ಷದ ವಕ್ತಾರೆ ರೇಣುಕಾ ಚೌಧರಿ ಅವರನ್ನು ಪಕ್ಷದ ಅಭ್ಯರ್ಥಿಗಳಾಗಿ ಕಾಂಗ್ರೆಸ್ ಪ್ರಕಟಿಸಿದೆ. ಜಾರ್ಖಂಡದಿಂದ ಪ್ರದೀಪ್ ಬಾಲಮುಚು, ಗುಜರಾತ್‌ನಿಂದ ಪ್ರವೀಣ್ ರಾಷ್ಟ್ರಪಾಲ್, ಹರಿಯಾಣದಿಂದ ಶಾದಿಲಾಲ್ ಬಾತ್ರಾ ಪಕ್ಷದ ಅಭ್ಯರ್ಥಿಗಳು ಎಂದು ಎಐಸಿಸಿಪ್ರಕಟಣೆ ತಿಳಿಸಿದೆ.ಮಧ್ಯಪ್ರದೇಶದಿಂದ ಸತ್ಯವ್ರತ ಚತುರ್ವೇದಿ, ಉತ್ತರಾಖಂಡದಿಂದ ಮಹೇಂದ್ರ ಸಿಂಗ್ ಮೆಹರಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.ಅರುಣ್ ಜೇಟ್ಲಿ ಅವರನ್ನು ಬಿಜೆಪಿ ಮೂರನೇ ಬಾರಿಗೆ ಗುಜರಾತ್‌ನಿಂದ ರಾಜ್ಯಸಭೆಗೆ ಸ್ಪರ್ಧಿಸಲು ಅವಕಾಶ ನೀಡಿದ್ದು, ಅವರು ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಜೇಟ್ಲಿ ಜತೆಗೆ ಮನ್‌ಸುಖ್‌ಮಾಂಡವಿಯಾ ಮತ್ತು ಶಂಕರ್ ವೆಗಾದ್ ಅವರೂ ನಾಮಪತ್ರ ಸಲ್ಲಿಸಲಿದ್ದಾರೆ.

ಫಗನ್ ಸಿಂಗ್ ಕುಲಸ್ತೆ, ನಜ್ಮಾ ಹೆಫ್ತುಲ್ಲಾ, ಕಫ್ತಾನ್ ಸಿಂಗ್ ಸೋಳಂಕಿ ಸಹ ಬಿಜೆಪಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಲಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.