ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ

7
ಡಿ.26,29ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ

Published:
Updated:

ವಾಡಿ: ಕಳೆದ ಎರಡು ತಿಂಗಳಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ಪ್ರಕಟವಾಗದೆ ತೆರೆಮರೆಯಲ್ಲಿ ನಡೆದ ರಾಜಕೀಯ ಚಟುವಟಿಕೆಗಳಿಗೆ ಕೊನೆಗೂ ಡಿ.26,29ರಂದು ಮೂಹರ್ತ ಪಿಕ್ಸ್ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ ತಿಳಿಸಿದ್ದಾರೆ.ಪಟ್ಟಣದ ಸಮೀಪ ಇರುವ ಇಂಗಳಗಿ ಗ್ರಾಮ ಪಂಚಾಯಿತಿಯಲ್ಲಿ ಇಂಗಳಗಿ 12, ಕುಂದನೂರು 6 ಸದಸ್ಯರು ಸೇರಿದಂತೆ ಒಟ್ಟು 19 ಸದಸ್ಯರು ಇದ್ದಾರೆ. ಇದರಲ್ಲಿ ಕಾಂಗ್ರೆಸ್ ಬೆಂಬಲಿತ 10, ಬಿಜೆಪಿ ಬೆಂಬಲಿತ 9 ಸದಸ್ಯರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪರಿಶಿಷ್ಟಜಾತಿ ಮಹಿಳೆ) ಸ್ಥಾನಕ್ಕಾಗಿ ಡಿ.26ರಂದು ಗ್ರಾಮ ಪಂಚಾಯಿತಿಯಲ್ಲಿ ಬೆಳಿಗ್ಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.ಕಾಂಗ್ರೆಸ್ ಬೆಂಬಲಿತ 10 ಸದಸ್ಯರಲ್ಲಿ ಈಗಾಗಲೇ ಕುಂದನೂರು ಸದಸ್ಯ ಸಂಗಣ್ಣ ಮೃತ ಪಟ್ಟಿದ್ದಾರೆ. ಮತ್ತು ಬಾಬುಮಿಂಯಾ ಗಂವಾರ್, ಶಾಂತಪ್ಪ ಕಟ್ಟಿಮನಿ, ಚಂದಮ್ಮ ರಾಜಪ್ಪ ಎಂಬುವರೂ ಈಗಾಗಲೇ ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡು ಗ್ರಾಮ ತೊರೆದಿದ್ದಾರೆ. ಇದರಿಂದ ಬಿಜೆಪಿ ಸಂಖ್ಯಾಬಲ 12ಕ್ಕೆ ಎರಿದೆ. ಇದರಿಂದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಜೆಪಿ ಬೆಂಬಲಿತ ಸದಸ್ಯರೇ ಜಯ ಸಾಧಿಸುವ ಲಕ್ಷಣ ನಿಶ್ಚಳವಾಗಿದೆ ಎಂದು ರಾಜಕೀಯ ಮೂಲಗಳಿಂದ ತಿಳಿದು ಬಂದಿದೆ.ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಬಿಜೆಪಿ ಬೆಂಬಲಿತ ಸದಸ್ಯ ಮಲ್ಲಿಕಾರ್ಜುನ ಸಾಹು ಯಾದಗಿರಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸಂಗಣ್ಣಗೌಡ ಪೊಲೀಸ್ ಪಾಟೀಲ, ಡಾ. ಬಸವಂತರಾಯ ಪೊಲೀಸ್ ಪಾಟೀಲ ನಡುವೆ ಅಧ್ಯಕ್ಷ ಗದ್ದುಗೆಗಾಗಿ ತೀವ್ರ ಪೈಪೋಟಿ ನಡೆದಿದೆ.ಆದರೆ ಕಾಂಗ್ರೆಸ್ ಬೆಂಬಲಿತ 3ಸದಸ್ಯರು ಬಿಜೆಪಿಯಲ್ಲಿ ಗುರುತಿಸಿಕೊಂಡ ಪರಿಣಾಮ ಬಿಜೆಪಿ ಸಂಖ್ಯಾಬಲ 12ಕ್ಕೆ ಏರಿದೆ. ಇದರಿಂದ ಬಿಜೆಪಿ ಬೆಂಬಲಿತ ಸದಸ್ಯ ಮಲ್ಲಿಕಾರ್ಜುನ ಸಾಹು ಯಾದಗಿರಿ ಅಧ್ಯಕ್ಷ ಗದ್ದುಗೆ ಗಿಟ್ಟಿಸುವ ಕೊಳ್ಳುವ ಎಲ್ಲ ಲಕ್ಷಣ ಕಂಡು ಬರುತ್ತಿವೆ ಎಂದು ಹೇಳಲಾಗುತ್ತಿದೆ.ಕಾಂಗ್ರೆಸ್ ಭದ್ರ ಕೊಟೆ ಚಿದ್ರ: ಇಂಗಳಗಿ ಗ್ರಾಮ ಪಂಚಾಯಿತಿಯಲ್ಲಿ ಸತತ 20ವರ್ಷಗಳಿಂದ ಕಾಂಗ್ರೆಸ್ ಹಿರಿಯ ಮುಖಂಡ ಅಣ್ಣರಾವ ಪೊಲೀಸ್ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಸಂಪ್ರಾದಾಯ ಇತ್ತು.ಆದರೆ ಗ್ರಾಮದ ಬಿಜೆಪಿ ಹಿರಿಯ ಮುಖಂಡ ದೂಳಪ್ಪ ಸಾಹು ಯಾದಗಿರಿ ಕಳೆದ ಹಲವು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸತತ ಸೋಲುಕಂಡಿದ್ದರು. ಆದರೆ ಈ ಬಾರಿ ಅವರ ಮಗ ಮಲ್ಲಿಕಾರ್ಜುನ ಸಾಹು ಯಾದಗಿರಿ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಆಯ್ಕೆಯಾದರಿಂದ ಸಹಜವಾಗಿಯೇ ಈ ಬಾರಿ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇದರಿಂದ ಗ್ರಾಮದ ಪ್ರತಿ ಗಲ್ಲಿ ಗಲ್ಲಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.ಗಲಾಟೆ ಸಂಭವ: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟಿದ್ದರಿಂದ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಧ್ಯ ಗಲಾಟೆ ನಡೆಯುವ ಸಂಭವ ಇದೆ. ಇದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry