ಸೋಮವಾರ, ಮೇ 23, 2022
21 °C

ಕಾಂಗ್ರೆಸ್ ವಿರೋಧಿ ನಿಲುವಿನಿಂದ ಬಿಜೆಪಿಗೆ ಲಾಭವಾಗದು: ಅಣ್ಣಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ತಮ್ಮ ಕಾಂಗ್ರೆಸ್ ವಿರೋಧಿ ನಿಲುವು ಮತ್ತು ಎಲ್ಲ ಪಕ್ಷಗಳಿಂದಲೂ ಒಳ್ಳೆಯ ಜನರನ್ನು ಆಯ್ಕೆ ಮಾಡಬೇಕೆಂಬ ಕರೆಯಲ್ಲಿ ಯಾವುದೇ `ತಾತ್ವಿಕ ಗೊಂದಲ~ಗಳಿಲ್ಲ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.`ಸಂಸತ್‌ನ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಜನಲೋಕಪಾಲ ಮಸೂದೆಯನ್ನು ಅಂಗೀಕರಿಸದಿದ್ದರೆ, ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಕೈಗೊಳ್ಳುವುದಾಗಿ ತಾವು ಪ್ರಕಟಿಸಿರುವುದರಿಂದ ಬಿಜೆಪಿಗೆ ಲಾಭವಾಗುವ ಬಗ್ಗೆ ಗೊಂದಲಕ್ಕೀಡಾಗಿಲ್ಲ~ ಎಂದು ಅವರು ಬುಧವಾರ ಮರಾಠಿ ಟಿವಿ ಚಾನೆಲ್‌ವೊಂದು ಬಿತ್ತರಿಸಿದ ಚರ್ಚೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.ತಮ್ಮ ಹೇಳಿಕೆಯಿಂದ ತಾತ್ವಿಕ ಗೊಂದಲವಿದ್ದರೆ, `ಗೃಹ ಸಚಿವ ಪಿ. ಚಿದಂಬರಂ ಮತ್ತು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ನಡುವಿನ ಭಿನ್ನಾಭಿಪ್ರಾಯ ಏನು ಮತ್ತು ಈ ಶೀಥಲಸಮರ ಯಾವ ರೀತಿಯ ಗೊಂದಲ~ ಎಂದು ಅವರು ಪ್ರಶ್ನಿಸಿದ್ದಾರೆ.

`ಪ್ರಸ್ತತ ಕೇಂದ್ರದಲ್ಲಿ ಬಹುಮತಗಳೊಂದಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಅದು ಮನಸ್ಸು ಮಾಡಿದರೆ ಲೋಕಪಾಲ ಶಾಸನವನ್ನು ಯಶಸ್ವಿಯಾಗಿ ಜಾರಿಗೊಳಿಸಬಹುದು~ ಎಂದ ಅವರು, ಇದಕ್ಕೆ ವಿಫಲವಾಗಿರುವ ಕಾಂಗ್ರೆಸ್ ವಿರುದ್ಧ ಚುನಾವಣಾ ಪ್ರಚಾರ ನಡೆಸುವುದರಿಂದ ಬಿಜೆಪಿಗೆ ಯಾವುದೇ ಲಾಭವಾಗುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನುಡಿದಿದ್ದಾರೆ.`ಎಲ್ಲ ಪಕ್ಷಗಳ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಮತದಾರರಿಗೆ ಸೂಚಿಸಿ, ಕಾಂಗ್ರೆಸ್ ವಿರೋಧಿ ಮತ ಯಾಚಿಸುವುದರಿಂದ ಯಾವುದೇ ಗೊಂದಲವೂ ಸೃಷ್ಟಿಯಾಗದು~ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.