ಕಾಂಟಾಕ್ಟ್ ಲೆನ್ಸ್ ಖರೀದಿಗೆ ಕೊಡುಗೆ

ಗುರುವಾರ , ಜೂಲೈ 18, 2019
29 °C

ಕಾಂಟಾಕ್ಟ್ ಲೆನ್ಸ್ ಖರೀದಿಗೆ ಕೊಡುಗೆ

Published:
Updated:

ನ್ನಡಕ ಮತ್ತು ಕಾಂಟಾಕ್ಟ್ ಲೆನ್ಸ್‌ಗಳ ಮಾರಾಟ ಸರಣಿ ವಿಷನ್ ಎಕ್ಸ್‌ಪ್ರೆಸ್ ಮಳೆಗಾಲದಲ್ಲಿಯೂ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ. ಮಾಸಿಕ ಕಾಂಟಾಕ್ಟ್ ಲೆನ್ಸ್‌ಗಳ ಮೂರು ಬಾಕ್ಸ್‌ಗಳನ್ನು ಖರೀದಿಸಿದಾಗ ಒಂದು ಬಾಕ್ಸ್ ಉಚಿತವಾಗಿ ಪಡೆಯುವ ಅವಕಾಶವನ್ನು ಅದು ನೀಡಿದೆ.ಕನ್ನಡಕ, ಕನ್ನಡಕದ ಲೆನ್ಸ್, ತಂಪು ಕನ್ನಡಕ ಮತ್ತು ಕಾಂಟಾಕ್ಟ್ ಲೆನ್ಸ್‌ಗಳನ್ನು ಒಳಗೊಂಡಿರುವ ವಿಷನ್ ಎಕ್ಸ್‌ಪ್ರೆಸ್‌ನಲ್ಲಿ ಮಾಸಿಕ ಹಾಗೂ ಪ್ರತಿದಿನ ಬಳಸಿ ಎಸೆಯುವ ಕಾಂಟಾಕ್ಟ್ ಲೆನ್ಸ್‌ಗಳು ಸ್ಪೆರಿಕಲ್ ಹಾಗೂ ಟೋರಿಕ್ ಶ್ರೇಣಿಗಳಲ್ಲಿ ಹಾಗೂ ಬಣ್ಣದ ಕಾಂಟಾಕ್ಟ್ ಲೆನ್ಸ್‌ಗಳ ಬೃಹತ್ ಸಂಗ್ರಹವಿದೆ.

ಯೂರೋಪ್‌ನಲ್ಲಿ ತಯಾರಾಗುವ ವಿಷನ್ ಎಕ್ಸ್‌ಪ್ರೆಸ್‌ನ ಕಾಂಟಾಕ್ಟ್ ಲೆನ್ಸ್‌ಗಳು ಬಾಳ್ವಿಕೆ ಮತ್ತು ಗುಣಮಟ್ಟಕ್ಕೆ ಹೆಸರಾಗಿವೆ. ಭಾರತದಲ್ಲಿ ಜನರ ಆದಾಯ ಮಟ್ಟ ಗಣನೀಯವಾಗಿ ಹೆಚ್ಚಿದೆ. ಆದ್ದರಿಂದ ಟ್ರೆಂಡ್‌ಗಳಿಗೆ ತಕ್ಕಂತೆ ಜನರ ಜೀವನಶೈಲಿಯೂ ಬದಲಾಗುತ್ತಿದೆ.

ಇದೇ ಕಾರಣದಿಂದ ಕಾಂಟಾಕ್ಟ್ ಲೆನ್ಸ್‌ಗಳ ಬಳಕೆಯೂ ಭಾರತದಲ್ಲಿ ಹೆಚ್ಚುತ್ತಿದೆ ಎಂದು ವಿಷನ್ ಎಕ್ಸ್‌ಪ್ರೆಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುಯ್ಯಂ ಬ್ರುವೇಟ್ ಅಭಿಪ್ರಾಯಪಟ್ಟಿದ್ದಾರೆ. ಕೊಡುಗೆಗಳ ಬಗೆಗಿನ ಹೆಚ್ಚಿನ ಮಾಹಿತಿಗೆ ವಿಷನ್ ಎಕ್ಸ್‌ಪ್ರೆಸ್ ಮಳಿಗೆಗಳಿಗೆ ಭೇಟಿ ಕೊಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry