ಕಾಂಬೋಡಿಯದ ಮಾಜಿ ದೊರೆ ನರೋದಮ್ ನಿಧನ

7

ಕಾಂಬೋಡಿಯದ ಮಾಜಿ ದೊರೆ ನರೋದಮ್ ನಿಧನ

Published:
Updated:

ನಾಂಪೆನ್ (ಐಎಎನ್‌ಎಸ್): ಕಾಂಬೋಡಿಯ ಮಾಜಿ ದೊರೆ ನರೋದಮ್ ಸಿಂಹನೂಕ್ (90)  ನಿಧನರಾಗಿದ್ದಾರೆ.1922ರ ಅಕ್ಟೋಬರ್ 31ರಂದು ಜನಿಸಿದ ಸಿಂಹನೂಕ್, ಅನೇಕ ವರ್ಷಗಳಿಂದ ಕ್ಯಾನ್ಸರ್, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಚೀನದ ಬೀಜಿಂಗ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಯೇ ಸೋಮವಾರ ಬೆಳಗಿನ ಜಾವ 2 ಗಂಟೆಗೆ ನಿಧನರಾದರು ಎಂದು ಕಾಂಬೋಡಿಯಾ ಉಪಪ್ರಧಾನಿ   ನಿಕ್ ಬನ್ ಚಾಯೆದ್ ದೃಢಪಡಿಸಿದ್ದಾರೆ.ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸಿಂಹನೂಕ್, ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಜತೆ ನಿಕಟ ಸಂಬಂಧ ಇಟ್ಟುಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry