ಕಾಂಬೋಡಿಯ: ಆಡಳಿತ ಪಕ್ಷಕ್ಕೆ ಜಯ

7

ಕಾಂಬೋಡಿಯ: ಆಡಳಿತ ಪಕ್ಷಕ್ಕೆ ಜಯ

Published:
Updated:

ನಾಮ್‌ಪೇಹ್ (ಎಎಫ್‌ಪಿ): ವ್ಯಾಪಕ ಚುನಾವಣಾ ಅಕ್ರಮಗಳು ನಡೆದಿರುವುದಾಗಿ ದೂರಿ ವಿರೋಧಪಕ್ಷ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿರುವುದರ ನಡುವೆಯೂ ಕಾಂಬೋಡಿಯದ ಪ್ರಧಾನಿ ಹನ್ ಸೇನ್ ನೇತೃತ್ವದ ಆಡಳಿತಾರೂಢ ಕಾಂಬೋಡಿಯನ್ ಪೀಪಲ್ಸ್ ಪಾರ್ಟಿ (ಸಿಪಿಪಿ) ಮತದಾನದಲ್ಲಿ ವಿಜಯ ಸಾಧಿಸಿದೆ ಎಂದು ಚುನಾವಣಾ ಸಮಿತಿ ಪ್ರಕಟಿಸಿದೆ.ಸಿಪಿಪಿ 68 ಸ್ಥಾನಗಳಲ್ಲಿ ಹಾಗೂ ವಿರೋಧ ಪಕ್ಷ ಕಾಂಬೋಡಿಯ ನ್ಯಾಷನಲ್ ರೆಸ್ಕ್ಯೂ ಪಾರ್ಟಿ (ಸಿಎನ್‌ಆರ್‌ಪಿ) 55 ಸ್ಥಾನಗಳನ್ನು ಗೆದ್ದಿದೆ ಎಂದು ದೇಶದ ಚುನಾವಣಾ ಸಮಿತಿ ಘೋಷಿಸಿದೆ. ಆದರೆ ಇದನ್ನು ವಿರೋಧ ಪಕ್ಷ ಒಪ್ಪಿಕೊಂಡಿಲ್ಲ.ಕಳೆದ ಜುಲೈ ತಿಂಗಳಲ್ಲಿ ಚುನಾವಣೆ ನಡೆದಿದ್ದು, ಮತದಾನದಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ದೂರಿ ವಿರೋಧ ಪಕ್ಷ ಪ್ರತಿಭಟನೆ ಕೈಗೊಂಡಿದ್ದರಿಂದ ರಾಜಕೀಯ ಅಸ್ಥಿರತೆ ಕಾಣಿಸಿಕೊಂಡಿತ್ತು. ಕಳೆದ ಬಾರಿಯ ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿ ಸಿಪಿಪಿ 22 ಸ್ಥಾನಗಳನ್ನು ಕಳೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry