ಶನಿವಾರ, ಮೇ 8, 2021
26 °C

ಕಾಗದದಲ್ಲಿ ಗ್ರೀನ್ ಗಣೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮ್ಕಿ ಬಿಗ್ ಹಸಿರು ಗಣೇಶನ ವಿಸರ್ಜನೆ ಭಾನುವಾರ ಹಲಸೂರು ಕೆರೆಯಲ್ಲಿ ನಡೆಯಿತು. ಸೆಂಟ್ರಲ್ ಮಾಲ್‌ನಿಂದ ಹೊರಟ ಮೆರವಣಿಗೆ ಮುಂಭಾಗದಲ್ಲಿ ಸಾಂಪ್ರದಾಯಿಕ ಸಂಗೀತ, ನೃತ್ಯ ಹಾಗೂ ಡೊಳ್ಳು ತಂಡಗಳಿದ್ದವು.10 ಅಡಿ ಎತ್ತರದ ಈ ಗಣೇಶ ಮೂರ್ತಿಯನ್ನು ರದ್ದಿ ಕಾಗದ ಬಳಸಿ ನಿರ್ಮಿಸಲಾಗಿತ್ತು ಎನ್ನುವುದೇ ವಿಶೇಷ. ಕಲಾವಿದ ಅಕ್ಷಯ್ ಹೆಬ್ಳೀಕರ್, ಗಾಯಕಿ ಚೈತ್ರಾ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ನಂದಕುಮಾರ್ ಅವರು ಈ ಹಸಿರು ಗಣೇಶನ ಪರಿಕಲ್ಪನೆಯನ್ನು ಬಹುವಾಗಿ ಶ್ಲಾಘಿಸಿದರು. ಜನರಲ್ಲಿ ಜಾಗೃತಿ ಮೂಡಿಸಲು ರಾಮ್ಕಿ ಹಾಗೂ ಎವರ್‌ಶೂರ್ ಆರ್‌ಒ ವಾಟರ್ ಪ್ಯೂರಿಫೈಯರ್ ಸಂಸ್ಥೆ ಜತೆಗೂಡಿ 92.7 ಬಿಗ್ ಎಫ್‌ಎಂ ಕೇಂದ್ರ ಈ `ರಾಮ್ಕಿ ಬಿಗ್ ಗ್ರೀನ್ ಗಣೇಶ~ ಪ್ರತಿಷ್ಠಾಪಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.