ಕಾಗಿನೆಲೆ ಪ್ರಾಧಿಕಾರದಿಂದ ಭೂಮಿ ಒತ್ತುವರಿ ಆರೋಪ

7

ಕಾಗಿನೆಲೆ ಪ್ರಾಧಿಕಾರದಿಂದ ಭೂಮಿ ಒತ್ತುವರಿ ಆರೋಪ

Published:
Updated:

ಶಿಗ್ಗಾವಿ: ತಾಲ್ಲೂಕಿನ ಬಾಡ ಗ್ರಾಮದಲ್ಲಿ ಕಾಗಿನೆಲೆ ಪ್ರಾಧಿಕಾರ ಭೂಮಿ ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿ ರೈತ ಕುಟುಂಬದ ಸರ್ವ ಸದಸ್ಯರು ಪಟ್ಟಣದ ತಹಸೀಲ್ದಾರ ಕಚೇರಿ ಎದುರಿಗೆ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.ತಾಲ್ಲೂಕಿನ ಬಾಡ ಗ್ರಾಮದಲ್ಲಿ ನಿವಾಸಿಗಳಾದ ನೀಲವ್ವ ಕೊಪ್ಪದ ಮತ್ತು ಪರಸಪ್ಪ ವೀರಪ್ಪ ಕಳಸದ ಇವರು ಸುಮಾರು 50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸುಮಾರು ನಾಲ್ಕು ಎಕರೆ ಭೂಮಿಯನ್ನು ಕಾಗಿನೆಲೆ ಪ್ರಾಧಿಕಾರದ ಅಧಿಕಾರಿಗಳು ಕನಕನ ಬಾಡ ಅಭಿವೃದ್ಧಿ ನೆಪದಲ್ಲಿ ಒತ್ತುವರಿ ಮಾಡಿಕೊಂಡಿದ್ದಾರೆ.

 

ಪ್ರಾಧಿಕಾರ ಯಾವುದೆ ಸೂಚನೆ ನೀಡದೆ ಹಾಗೂ ಭೂಮಾಲೀಕ, ರೈತನ ಅನುಮತಿ ಪಡೆಯದೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಎರಡು ಕುಟುಂಬಗಳು ಬೀದಿಗೆ ಬಿಳುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.1994ರಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಸಂದರ್ಭದಲ್ಲಿ ಈ ಎರಡು ಕುಟುಂಬಗಳ ಭೂಮಿಯನ್ನು ಸಕ್ರಮಗೊಳಿಸಲು ಠರಾವು ಮಾಡಿ ಅದನ್ನು ಸಂಬಂಧಿಸಿದ ತಹಸೀಲ್ದಾರರಿಗೆ ಪತ್ರಬರೆದಿದ್ದರು. ಆದರೆ ಈವರೆಗೆ ಬಂದಿರುವ ತಹಸೀಲ್ದಾರರು ತಮ್ಮ ಕುಟುಂಬದ ಭೂಮಿಯನ್ನು ಆರ್‌ಟಿಸಿಯಲ್ಲಿ ದಾಖಲು ಮಾಡಿಲ್ಲ. ಅದರಿಂದ ತಮಗೆ ಅನ್ಯಾಯವಾಗಿದೆ ಎಂದು ಕುಟುಂಬದ ಸದಸ್ಯರು ಆತಂಕ ವ್ಯಕ್ತಪಡಿಸಿದರು.ರೈತರ ಭೂಮಿಯನ್ನು ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶಗಳಿಲ್ಲ ಎಂದು ಸರ್ಕಾರದ ಆದೇಶವನ್ನು ತಹಸೀಲ್ದಾರ ಕಚೇರಿಯಿಂದ 2011ರ ಜನವರಿ 4ರಂದು ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಕಾಗಿನೆಲೆ ಪ್ರಾಧಿಕಾರದ ಅಧಿಕಾರಿಗಳು ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಭೂಮಿಯನ್ನು ವುದು ಯಾವ ನ್ಯಾಯ? ಎಂದು ರೈತ ಕುಟುಂಬದ ಸದಸ್ಯರು ಕಣ್ಣೀಟ್ಟರು.`ಸುಮಾರು ಎಂಟು ದಿನಗಳ ಕಾಲ ರಾತ್ರಿ-ಹಗಲು ಎನ್ನದೆ ಇಡೀ ಕುಟುಂಬ ಮಕ್ಕಳುಮರಿಗಳನ್ನು ಕಟ್ಟಿಕೊಂಡು ಪ್ರತಿಭಟನೆ ನಡೆಸಿದರೂ ಈ ವರೆಗೆ ಯಾವುದೇ ಅಧಿಕಾರಿಗಳು ಬಂದು ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಅಧಿಕಾರಿಗಳು ಕಣ್ಣಿದ್ದು ಕಾಣದಂತೆ ವರ್ತಿಸುತ್ತಿದ್ದಾರೆ. ತಕ್ಷಣ ಮೇಲಧಿಕಾರಿಗಳು ನಮ್ಮ ಸಮಸ್ಯೆಗಳ ಕಡೆ ಗಮನ ಹರಿಸಿ ನ್ಯಾಯ ನೀಡಬೇಕು. ಇಲ್ಲವಾದರೆ ಇಡೀ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ~ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.ವಿವಿಧ ಸಂಘಟನೆಗಳ ಬೆಂಬಲ: ತಾಲ್ಲೂಕು ಕರವೇ ಘಟಕ, ತಾಲ್ಲೂಕು ದಲಿತ ಸಂಘರ್ಷ ಸಮಿತಿ, ತಾಲ್ಲೂಕು ಎಸ್‌ಎಫ್‌ಐ ಘಟಕ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನಾ ನಿರತ ರೈತ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry