ಭಾನುವಾರ, ಡಿಸೆಂಬರ್ 15, 2019
21 °C

ಕಾಜೊಲ್‌ಗೂ ಚಮೇಲಿ ಆಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಜೊಲ್‌ಗೂ ಚಮೇಲಿ ಆಸೆ

`ಚಿಕನಿ ಚಮೇಲಿ..~, `ಶೀಲಾ ಕಿ ಜವಾನಿ~ ಹಾಡುಗಳೆಲ್ಲ ಸೂಪರ್ ಹಿಟ್ ಆದ ನಂತರ ಕಾಜೊಲ್‌ಗೂ ಐಟಂ ಹಾಡುಗಳಲ್ಲಿ ಹೆಜ್ಜೆ ಹಾಕುವ ಆಸೆ ಉಂಟಾಗಿದೆಯಂತೆ. `ನಾನು ಹೆಜ್ಜೆ ಹಾಕಬಲ್ಲೆನೋ ಇಲ್ಲವೋ ಹೇಳಲಾರೆ. ಆದರೆ ಐಟಂ ಸಾಂಗಿನಲ್ಲಿ ನಟಿಸಬೇಕು ಎಂಬ ಆಸೆಯಂತೂ ಮೂಡಿದೆ~ ಎಂದು ಹೇಳಿ ಕಾಜೊಲ್ ಅಚ್ಚರಿ ಮೂಡಿಸಿದ್ದಾರೆ.

ಈ ವರ್ಷದ ರಾ ಒನ್ ಚಿತ್ರದಲ್ಲಿ `ಛಮ್ಮಕ್ ಛಲ್ಲೊ~ಗೆ ಕರೀನಾಳ ಠುಮಕಾಗಳು ಮನಮೋಹಕವಾಗಿತ್ತು. ಬಿಪಾಶಾ ಅಂತೂ `ಬೀಡಿ ಜಲೈಲೆ..~ ಹಾಡಿನಿಂದ ಹುಡುಗರ ಹೃದಯದಲ್ಲಿ ಕಿಚ್ಚನ್ನೇ ಎಬ್ಬಿಸಿದ್ದರು. ಐಶ್ವರ್ಯ ರೈ ಸಹ ಬಂಟಿ ಔರ್ ಬಬ್ಲಿಯಲ್ಲಿ `ಕಜರಾರೆ..~ ಹಾಡಿಗೆ ಹೆಜ್ಜೆ ಹಾಕಿದ್ದರು. ಆದರೆ ಈಗಲೂ ಖುಷಿ ಕೊಡುವುದು `ಮುನ್ನಿ ಬದನಾಮ್ ಹುವಿ~ ಹಾಡು. ಮಲೈಕಾ ಅರೋರಾ ಖಾನ್ ಬಳ್ಳಿಯಂತೆ ಬಳಕುತ್ತಾರೆ. ಇದನ್ನೆಲ್ಲ ನೋಡಿದಾಗ ತಮಗೂ ಐಟಂ ಹಾಡು ಮಾಡುವಾಸೆ ಎಂದು ಹೇಳಿದ್ದಾರೆ.

`ಪತಾ ನಹಿ ಮೈ ಕರ್‌ಪಾವುಂಗಿ ಯಾ ನಹಿ, ಅಚ್ಛಿ ಲಗುಂಗಿ ಯಾ ನಹಿ~ (ನಾನು ಮಾಡಬಲ್ಲೆನೆ, ಚಂದ ಕಾಣುವೆನೆ) ಎಂಬ ಆತಂಕವನ್ನೂ ವ್ಯಕ್ತ ಪಡಿಸಿದ್ದಾರೆ. 

ಮಾಧುರಿ ದೀಕ್ಷಿತ್ ಕೂಡ ಟೀವಿ ಕಾರ್ಯಕ್ರಮವೊಂದರಲ್ಲಿ ಇತ್ತೀಚಿನ ನಾಯಕಿಯರಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾತನಾಡುತ್ತಾ, ಐಟಂ ಹಾಡೆಂಬುದು ಸಾಮಾನ್ಯ ಎಂಬಂತಾಗಿದೆ ಎಂದಿದ್ದರು. ಕತ್ರಿನಾ ಕೈಫ್ ತರಹದ ನಟಿ ಚಿತ್ರವೊಂದಕ್ಕೆ ಬರೀ ತಮ್ಮ ನೃತ್ಯವಿರುವ ಒಂದು ಹಾಡಿನಿಂದ ಉತ್ತಮ ಆರಂಭ ದಕ್ಕಿಸಿಕೊಡುತ್ತಿರುವುದರಿಂದ ಕಾಜೊಲ್ ಆಸೆ ಸಹಜವಾದದ್ದೆ.

ಪ್ರತಿಕ್ರಿಯಿಸಿ (+)