ಗುರುವಾರ , ಜೂನ್ 24, 2021
25 °C

ಕಾಜೊಲ್ ತನಿಷಾ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಢ ನೀಲಿ ಲೆಹೆಂಗಾ ಚೋಲಿಯಲ್ಲಿ ತನಿಷಾ ರಾಂಪ್ ಮೇಲೆ ನಡೆಯುತ್ತಿದ್ದರೆ ಅಕ್ಕ ಕಾಜೊಲ್ ಹೂಮುತ್ತನ್ನು ತೇಲಿ ಬಿಡುತ್ತಿದ್ದರು.

ಮುಂಬೈನಲ್ಲಿ ನಡೆಯುತ್ತಿರುವ ಲ್ಯಾಕ್ಮೆ ಫ್ಯಾಶನ್ ಇಂಡಿಯಾ ವೀಕ್‌ನ ನಾಲ್ಕನೆ ದಿನ ವಸ್ತ್ರ ವಿನ್ಯಾಸಕಿ ಪಾಯಲ್ ಸಿಂಘಾಲ್ ಅವರ ವಿನ್ಯಾಸದ ಲೆಹೆಂಗಾ ಅದು.

ರಾಂಪ್‌ನ ಎದುರಿನಲ್ಲಿಯೇ ಹೊಂಬಣ್ಣದ ನೆರಿಗೆಗಳಿರುವ ಅಂಗಿ ತೊಟ್ಟು ಕುಳಿತ ಕಾಜೊಲ್ ಕಂಗಳಲ್ಲಿ ಖುಷಿ ಮನೆ ಮಾಡಿತ್ತು.

ಚೋಲಿ ಲೆಹೆಂಗಾದ ದುಪ್ಪಟ್ಟಾದೊಂದಿಗೆ ತನಿಷಾ ಲಜ್ಜೆಯ ಪರದೆಯೂ ಸೇರಿದಂತೆ ನಡೆದು, ವಧು ಸಂಗ್ರಹಕ್ಕೆ ಹೊಸ ಮೆರುಗನ್ನೇ ನೀಡಿದರು.

ಈ ಉಡುಗೆ ಮದುವೆಗೆ ಹೇಳಿ ಮಾಡಿಸಿದಂತಿದೆ. ಸಂಕೋಚದ ಪರದೆಯನ್ನು ಹೊದ್ದೇ ಇರುವ ವಧು, ಯಾವತ್ತಿಗೂ ದೇಹ ಪ್ರದರ್ಶನಕ್ಕೆ ಒಪ್ಪಲಾರಳು. ಅದನ್ನೇ ಗಮನದಲ್ಲಿರಿಸಿಕೊಂಡು ಪಾಯಲ್ ಸಿಂಘಾಲ್ ಈ ವಸ್ತ್ರವನ್ನು ವಿನ್ಯಾಸಗೊಳಿಸಿದ್ದಾರೆ. ಮೈ ತುಂಬುವ ಬಟ್ಟೆಗಳಲ್ಲೂ ಆಕರ್ಷಕವಾಗಿ, ಮಾದಕವಾಗಿ ಕಾಣಬಹುದು ಎಂಬುದೇ ವಸ್ತ್ರ ವಿನ್ಯಾಸದ ವಿಶೇಷವಾಗಿದೆ ಎಂದೂ ತನಿಷಾ ಶಭಾಷ್‌ಗಿರಿ ನೀಡಿದರು.

ನನಗೆ ನನ್ನಕ್ಕ ಮುಂದಿನ ಸಾಲಿನಲ್ಲಿಯೇ ಕುಳಿತು ಹುರಿದುಂಬಿಸಿದ್ದು ಸಂತೋಷ ತಂದಿತು. ನಮ್ಮಿಬ್ಬರ ನಡುವೆ ಮೊದಲಿನಿಂದಲೂ ಆತ್ಮೀಯ ಬಾಂಧವ್ಯವಿದೆ. ಸಹೋದರಿಯರ ಪ್ರೀತಿಗಿಂತ ಸ್ನೇಹಿತೆಯರ ಸಲುಗೆ ಇದೆ. ಅಕ್ಕನ ಉಪಸ್ಥಿತಿಯೂ ಈ ರಾಂಪ್ ಶೋಗೆ ಹೊಸ ಮೆರುಗು ತಂದಿದೆ ಎಂದರು.

ವಧುವಿನ ಉಡುಗೆಯಲ್ಲಿ ಕಂಗೊಳಿಸುತ್ತಿರುವ ತಂಗಿಯನ್ನು ಎವೆಯಿಕ್ಕದೆ ಕಾಜೊಲ್ ನೋಡುತ್ತಿದ್ದರು. ಅತಿ ಮುದ್ದಿನ ತಂಗಿ ಎಂಬ ಖುಷಿಯೂ, ಸೌಂದರ್ಯವತಿ ಎಂಬ ಅಭಿಮಾನವೂ ಅವರ ನೋಟದಲ್ಲಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.