ಸೋಮವಾರ, ಮೇ 23, 2022
24 °C

ಕಾಟೇಜ್‌ನಲ್ಲಿ ದೀಪ ವೈವಿಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಗಳ ಹಬ್ಬ ದೀಪಾವಳಿ ಸಂತೋಷ, ಸಡಗರದ ಸಮಯ. ಕೇಂದ್ರ ಸರ್ಕಾರಿ ಸ್ವಾಮ್ಯದ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ (ಸಿಸಿಐಇ) ಈ ಹಬ್ಬವನ್ನು ವಿಶಿಷ್ಟ ಮತ್ತು ಸ್ಮರಣೀಯವಾಗಿಸಲು ಉದ್ದೇಶಿಸಿದೆ. ಅದಕ್ಕಾಗಿ ನ. 15ರ ವರೆಗೂ ವೈವಿಧ್ಯಮಯ ದೀಪ, ಕಲಾತ್ಮಕ ಸಾಮಗ್ರಿಗಳ ಪ್ರದರ್ಶನ ಹಾಗೂ ಮಾರಾಟ ನಡೆಸುತ್ತದೆ.ಇಲ್ಲಿ ಕೋಲ್ಕತ್ತ, ಪೂರ್ವ ಭಾರತ, ಉತ್ತರ ಭಾರತ ಮತ್ತು ದಕ್ಷಿಣ ಭಾರತದ ವಿವಿಧ ಭಾಗಗಳ 100ಕ್ಕೂ ಹೆಚ್ಚು ಶೈಲಿಯ ದೀಪಗಳಿವೆ. ಉತ್ತರ ಕರ್ನಾಟಕದ ಟೆರ್ರಾಕೋಟ ದೀಪ, ಉತ್ತರ ಪ್ರದೇಶದ ಕಂಚಿನ ದೀಪ, ತೂಗುದೀಪ, ಅಲಂಕಾರಿಕ ದೀಪ, ಗಣೇಶನ ದೀಪ, ಲಕ್ಷ್ಮಿ ದೀಪ, ಒಂಟೆ, ಆನೆ, ಕುದುರೆ, ಆಮೆ ಮತ್ತು ಮಾನವಾಕೃತಿಯ ದೀಪಗಳು, ಅಲ್ಲದೆ ಒರಿಸ್ಸಾದ ಡೋಕ್ರಾ ಶೈಲಿಯ ಮೇಣದ ಬತ್ತಿಯ ಸ್ಟಾಂಡ್‌ಗಳು, ಬಸ್ತಾರ್‌ನ ಲೋಹದ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ.ಇದರೊಂದಿಗೆ ರಾಜಸ್ತಾನದ ಬಾರ್ಮೇರ್‌ನ ಎಂಬ್ರಾಯಿಡರಿ ಮತ್ತು ಕನ್ನಡಿ ಕುಸುರಿಯ ಬೆಡ್‌ಸ್ಪ್ರೆಡ್, ಮಹಾರಾಷ್ಟ್ರದ ಪ್ರಿಂಟೆಡ್ ಬೆಡ್‌ಸ್ಪ್ರೆಡ್, ಜೋಧಪುರದ ಪೇಂಟ್ ಮಾಡಿದ ಮರದ ಪೀಠೋಪಕರಣಗಳು, ಮರದ ಕಲಾಕೃತಿ, ಕಂಚು ಮತ್ತು ಪೇಂಟ್ ಮಾಡಿದ ಕಬರ್ಡ್ ಮತ್ತು ರ್ಯಾಕ್ ಪ್ರದರ್ಶನದ ವಿಶೇಷ ಆಕರ್ಷಣೆ. ವಸ್ತುಗಳು ಪರಿಸರ ಸ್ನೇಹಿ. ಸಗಟು ರೂಪದಲ್ಲಿಯೂ ದೊರೆಯುತ್ತವೆ. 50 ರೂ.ನಿಂದ 2000 ರೂ. ಬೆಲೆ ಶ್ರೇಣಿ ಇದೆ..ಸ್ಥಳ: ಎಂ.ಜಿ. ರಸ್ತೆಯ ಸಿಸಿಐಇ ಆವರಣ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಮತ್ತು 3 ರಿಂದ ಸಂಜೆ 7. ಭಾನುವಾರವೂ ತೆರೆದಿರುತ್ತದೆ.

        

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.