ಕಾಟೇಜ್ ಮೇಳ

7

ಕಾಟೇಜ್ ಮೇಳ

Published:
Updated:

ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ (ಸಿಸಿಐಇ) ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಸಫೀನಾ ಪ್ಲಾಜಾದಲ್ಲಿ ‘ಕಾಟೇಜ್ ಮೇಳ‘ ನಡೆಸುತ್ತಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನೇಕಾರರು, ಶಿಲ್ಪಿಗಳು, ಕಲಾವಿದರು, ಕರಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಅವಕಾಶ ಗ್ರಾಹಕರಿಗೆ ಇಲ್ಲಿ ಲಭ್ಯವಿದೆ. ಖರೀದಿ ಜತೆಗೆ ಗ್ರಾಹಕರು ದೇಶದ ವಿವಿಧ ಸ್ಥಳಗಳಿಂದ ಬಂದಿರುವ ಕರಕುಶಲಕರ್ಮಿಗಳ ಜತೆ ಸಂವಾದವನ್ನೂ ನಡೆಸಬಹುದು.ಕಾಟೇಜ್ ಮೇಳದಲ್ಲಿ ಸೀರೆ, ಡ್ರೆಸ್ ಮಟೀರಿಯಲ್‌, ವರ್ಣಚಿತ್ರ, ಶಿಲ್ಪಕಲಾಕೃತಿ, ಲೋಹದ ಕಲಾಕೃತಿ, ಮಣ್ಣಿನ ತಯಾರಿಕೆ, ಕಲ್ಲು ಮತ್ತು ಮಾರ್ಬಲ್ ಕಲೆ, ಅಗರಬತ್ತಿ, ಸುಗಂಧ ದ್ರವ್ಯ, ಆಭರಣ, ಕಲಾವಂತಿಕೆಯ ಪೀಠೋಪಕರಣಗಳ ದೊಡ್ಡ ಸಂಗ್ರಹ ಇಲ್ಲಿದೆ. ಮೇಳದಲ್ಲಿರುವ ಎಲ್ಲ ಉತ್ಪನ್ನಗಳು ದೇಸಿ ಪರಂಪರೆ, ಧಾರ್ಮಿಕ ನಂಬಿಕೆ, ಜಾನಪದ, ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವಂಥವುಗಳಾಗಿವೆ.

ದೋಕ್ರಾ ಬ್ರಾಸ್ ಕ್ರಾಫ್ಟ್, ದಿಲ್ಲಿಯ ಪೀಠೋಪಕರಣಗಳು, ಮಹಾರಾಷ್ಟ್ರದ ವರ್ಲಿ ಆರ್ಟ್, ಬಸ್ಟರ್ ಆರ್ಟ್, ಮಧುಬನಿ ಪೇಂಟಿಂಗ್, ಲ್ಯಾಂಪ್‌ಶೇಡ್‌, ದೀಪ, ಕಂಚು ಮತ್ತು ಹಿತ್ತಾಳೆ ವಿಗ್ರಹ, ಆಗ್ರಾ ಮತ್ತು ಜೈಪುರ್‌ನ ಕಾಟರ್ ಡರ್ರಿ, ರಾಜಾಸ್ತಾನದ ಹರಳಿನ ಆಭರಣ, ಬಿಹಾರ ಮತ್ತು ರಾಜಾಸ್ತಾನದ ಕೈಮಗ್ಗದ ಹತ್ತಿಯ ಸೀರೆ, ಲಕ್ನೋದ ಚಿಕನ್ ಕುರ್ತಾ, ಸಿಲ್ಕ್ ಸ್ಕಾರ್ಫ್‌, ಟೈಗಳು ಮೇಳದಲ್ಲಿ ದೊರಕುತ್ತವೆ. ಸ್ಥಳ: ಸಫೀನಾ ಪ್ಲಾಜಾ, ಇನ್‌ಫೆಂಟ್ರಿ ರಸ್ತೆ. ಬೆಳಿಗ್ಗೆ ೧೦ರಿಂದ ರಾತ್ರಿ ೮. ಜನವರಿ ೧೯ ಕೊನೆಯ ದಿನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry