ಕಾಡಸಿದ್ದೇಶ್ವರ ಮಠಕ್ಕೆ ಸೋಮಣ್ಣ ಜೊತೆ ಸದಾನಂದಗೌಡ ಭೇಟಿ

7

ಕಾಡಸಿದ್ದೇಶ್ವರ ಮಠಕ್ಕೆ ಸೋಮಣ್ಣ ಜೊತೆ ಸದಾನಂದಗೌಡ ಭೇಟಿ

Published:
Updated:

ತಿಪಟೂರು: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತರಾದ ಸಚಿವ ವಿ.ಸೋಮಣ್ಣ ಅವರೊಂದಿಗೆ ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಸೋಮವಾರ ನಸುಕಿನಲ್ಲಿ ಗೌಪ್ಯವಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿದರು ಎಂದು ತಿಳಿದುಬಂದಿದೆ.ಸದಾನಂದ ಗೌಡರು ನಾಲ್ಕೈದು ತಿಂಗಳ ಹಿಂದೆ ಮಠದ ಸಮಾರಂಭವೊಂದರ ಸಂದರ್ಭದಲ್ಲಿ ಸ್ವಾಮೀಜಿ ಜತೆ ಗೌಪ್ಯವಾಗಿ ಪೂಜಾ ವಿಧಿ ನಡೆಸಿದ್ದರು ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಈಗ ಬಿಜೆಪಿಯ್ಲ್ಲಲಿನ ಆಂತರಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ವಿರೋಧಿ ಗುಂಪಿನ ಸಚಿವರೊಂದಿಗೆ ಆಗಮಿಸಿರುವುದು ಕುತೂಹಲಕ್ಕೆ ಎಡೆ ಮಾಡಿದೆ. ಯಡಿಯೂರಪ್ಪ ಕೂಡ ಈ ಮಠದ ಭಕ್ತರಾಗಿದ್ದು ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry