ಕಾಡಾನೆ ದಾಳಿಗೆ ರೈತ ಬಲಿ

7

ಕಾಡಾನೆ ದಾಳಿಗೆ ರೈತ ಬಲಿ

Published:
Updated:

ಕನಕಪುರ: ತಾಲ್ಲೂಕಿನ ಹುಣಸನಹಳ್ಳಿ ಬಳಿಯ ಗಂಗನಹಳ್ಳಿಯಲ್ಲಿ ಸೋಮವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಕಾಡಾನೆಯೊಂದು ತುಳಿದು ಸಾಯಿಸಿದೆ.ಮೃತ ದುರ್ದೈವಿಯನ್ನು ತೋಟ ಸಿದ್ದಪ್ಪ (65) ಎಂದು ಗುರುತಿಸಲಾಗಿದೆ. ಇವರು ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಮತ್ತು ಪತ್ನಿಯನ್ನು ಅಗಲಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸನಹಳ್ಳಿ ಸಮೀಪ ಗಂಗನಹಳ್ಳಿ ಹೊರ ವಲಯದಲ್ಲಿನ ಜಮೀನಿನಲ್ಲಿ ಇವರು ವಾಸವಿದ್ದರು.ಸಿದ್ದಪ್ಪ ಎಂದಿನಂತೆ ಬೆಳಿಗ್ಗೆ ಕುಟುಂಬದ ಸದಸ್ಯರೊಂದಿಗೆ ಜಮೀನಿನ ಅಂಚಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆಯೊಂದು ಅವರನ್ನು ತುಳಿದು ಹೋಗಿದ್ದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry