ಭಾನುವಾರ, ಜೂನ್ 13, 2021
26 °C

ಕಾಡಾನೆ ದಾಳಿಯಿಂದ ಕಾರ್ಮಿಕನ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಕಾಫಿ ತೋಟದಲ್ಲಿ ತಂಗಿದ್ದ ಕಾಡಾನೆಯನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ತಿತಿಮತಿ ಸಮೀಪದ ಮರಪಾಲದಲ್ಲಿ ಸೋಮವಾರ ಸಂಭವಿಸಿದೆ.ಮೃತಪಟ್ಟವರನ್ನು ದಾಸ್ (54) ಎಂದು ಗುರುತಿಸಲಾಗಿದೆ. ಅರಣ್ಯ ಇಲಾಖೆ ತಿತಿಮತಿಯ ಮರಪಾಲದ ಕಾಫಿ ತೋಟದಲ್ಲಿ ಕಳೆದ 15 ದಿನಗಳಿಂದ ಬೀಡು ಬಿಟ್ಟಿದ್ದ ಕಾಡಾನೆಯನ್ನು ಮರಳಿ ಕಾಡಿಗಟ್ಟಲು ದಸರಾ ಆನೆ `ಅಭಿಮನ್ಯು~ವನ್ನು ಬಳಸಿಕೊಳ್ಳಲಾಗಿತ್ತು.ಅಭಿಮನ್ಯುವಿನ ಮೂಲಕ ಕಾಡಾನೆಯನ್ನು ಕಾಡಿನತ್ತ ಓಡಿಸುವ ಸಂದರ್ಭದಲ್ಲಿ ದೇವರಪುರದ ಚರ್ಚ್‌ಗೆ ಸೇರಿದ ಕಾಫಿ ತೋಟದಲ್ಲಿ ಕಟ್ಟಿ ಹಾಕಿದ್ದ ಹಸುವೊಂದನ್ನು ಬಿಚ್ಚುತ್ತಿದ್ದ ದಾಸ್ ಅವರ ಮೇಲೆ ಕಾಡಾನೆ ದಾಳಿ ನಡೆಸಿತು.

ಇದರಿಂದ ತೀವ್ರ ಗಾಯಗೊಂಡ ದಾಸ್ ಅವರನ್ನು ಕಾರ್ಯಾಚರಣೆಯಲ್ಲಿದ್ದ ತಿತಿಮತಿ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ದೇವರಾಜ್ ಮತ್ತು ಸಿಬ್ಬಂದಿ ತಿತಿಮತಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಅವರು ಕೊನೆಯುಸಿರಳೆದಿದ್ದರು.ವಲಯಾಧಿಕಾರಿ ದೇವರಾಜ್ ಅವರು 2.5 ಲಕ್ಷ ರೂಪಾಯಿ ಪರಿಹಾರದ ಚೆಕ್‌ನ್ನು ದಾಸ್ ಕುಟುಂಬದವರಿಗೆ ನೀಡಿದರು. ಉಳಿದ 2.5 ಲಕ್ಷ ಮೊತ್ತದ ಪರಿಹಾರವನ್ನು ತಕ್ಷಣ ಕೊಡಿಸಿಕೊಡುವುದಾಗಿ ಹೇಳಿದರು. ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.