ಗುರುವಾರ , ಅಕ್ಟೋಬರ್ 17, 2019
26 °C

ಕಾಡಾನೆ ದಾಳಿಯಿಂದ ವ್ಯಕ್ತಿ ಸಾವು

Published:
Updated:

ಸಿದ್ದಾಪುರ: ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕರೇಷ್ಮೆ ಹಾಡಿಯ ನಿವಾಸಿ ಈರಾ ಮಂಗಳವಾರ ಕಾಡಾನೆ ತುಳಿತಕ್ಕೆ ಸಿಲುಕಿ  ಸಾವನ್ನಪ್ಪಿದ್ದಾರೆ. ಹಾಡಿಯ ಸಮೀಪ ಸಂಜೆ ವೇಳೆ ಕಾಡಾನೆ ದಾಳಿ ಮಾಡಿದ್ದು, ಅದರ ತುಳಿತಕ್ಕೆ ಸಿಲುಕಿ ಈರಾ ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಈರಾ ಕುಟುಂಬದ ಸದಸ್ಯರಿಗೆ ತಕ್ಷಣದ ಪರಿಹಾರವಾಗಿ ಅರಣ್ಯ ಇಲಾಖೆ ವತಿಯಿಂದ 5 ಸಾವಿರ ರೂಪಾಯಿ ನೀಡಲಾಗಿದೆ.  ಸ್ಥಳಕ್ಕೆ ಎಸಿಎಫ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ, ಡಿಎಫ್‌ಒ ಆನಂದ್, ಫಾರೆಸ್ಟರ್ ಶ್ರೀನಿವಾಸ್, ತಾ.ಪಂ. ಅಧ್ಯಕ್ಷ ದಿನೇಶ್, ಬುಡಕಟ್ಟು ಕೃಷಿಕರ ಮುಖಂಡ ಜೆ.ಕೆ. ರಾಮು, ಇತರರು ಭೇಟಿ ನೀಡಿದರು.

Post Comments (+)