ಕಾಡಾನೆ ದಾಳಿ: ಇಬ್ಬರಿಗೆ ಗಾಯ

7

ಕಾಡಾನೆ ದಾಳಿ: ಇಬ್ಬರಿಗೆ ಗಾಯ

Published:
Updated:

ಚಾಮರಾಜನಗರ: ಕಾಡಾನೆ ದಾಳಿಗೆ ಸಿಲುಕಿ ಮಹಿಳೆ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬಸವಾಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.ನಂಜಾಗ್ರ ಗ್ರಾಮದ ಶಿವಣ್ಣ ಹಾಗೂ ಚಿಕ್ಕಮೋಳೆಯ ರಾಜಮ್ಮ ಗಾಯಗೊಂಡವರು. ತೀವ್ರಗಾಯಗೊಂಡಿರುವ ಶಿವಣ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಮ್ಮ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸುವರ್ಣಾವತಿ ಜಲಾಶಯದ ಹಿನ್ನೀರು ಪ್ರದೇಶದಿಂದ ದಿಕ್ಕುತಪ್ಪಿ ಬಂದ ಕಾಡಾನೆಯು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಕಡೆಗೆ ನುಗ್ಗಿದೆ.ಆ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ಬಸವಾಪುರ ಹಾಗೂ ಡೊಳ್ಳಿಪುರದ ನಡುವಿನ ಜಮೀನಿಗಳಲ್ಲಿ ಸುತ್ತಾಡುತ್ತಿರುವ ಕಾಡಾನೆಯನ್ನು ಅರಣ್ಯದತ್ತ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹರಸಾಹಸಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry