ಕಾಡಾನೆ ದಾಳಿ: ಮೂವರು ಬಲಿ

7

ಕಾಡಾನೆ ದಾಳಿ: ಮೂವರು ಬಲಿ

Published:
Updated:

ಗೋಲ್‌ಪಾರ(ಅಸ್ಸಾಂ), (ಪಿಟಿಐ): ಕಾಡಾನೆಗಳ ಹಿಂಡು ಗ್ರಾಮಕ್ಕೆ ನುಗ್ಗಿ ನಡೆಸಿದ ದಾಳಿಗೆ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಮೂವರು ಬಲಿಯಾಗಿರುವ ಘಟನೆ ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಧಾಯ್‌ಗಾಂವ್ ಗ್ರಾಮದಲ್ಲಿ ನಡೆದಿದೆ.ಸಮೀಪದ ಗೋರ್ ಬೆಟ್ಟ ಪ್ರದೇಶದಿಂದ ಗ್ರಾಮಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಮೂವರನ್ನು ಕೊಂದು, ಸ್ಥಳೀಯ ಅಂಗಡಿಮುಗ್ಗಟ್ಟುಗಳು ಹಾಗೂ ಮನೆಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಪಾಲಕರು, ಗಾಳಿಯಲ್ಲಿ ಗುಂಡು ಹಾರಿಸಿ ಕಾಡಾನೆಗಳನ್ನು ಪುನಃ ಕಾಡಿಗೆ ಅಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry